ಸೊರಬ ತಾಲೂಕು ವಕೀಲರ ಸಂಘಕ್ಕೆ ಅಶೋಕ್ ‘ಸಾಮ್ರಾಟ್’

15sor4
ಸೊರಬ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ವೈ.ಅಶೋಕ್ ಕೊಡಕಣಿ, ಕಾರ್ಯದರ್ಶಿ ಎಸ್.ಅರುಣ್ ತೆಲಗುಂದ್ಲಿ, ಉಪಾಧ್ಯಕ್ಷೆ ಮಂಜುಳಾ, ಗೋಪಾಲ್ ಅವರನ್ನು ವಕೀಲರು ಸನ್ಮಾನಿಸಿದರು. ಡಾಕಪ್ಪ ಹೆಸರಿ, ಸುಧಾಕರ್ ನಾಯ್ಕ, ಕೆ.ಬಿ.ಬಸವರಾಜ್ ಇತರರಿದ್ದರು.
Published on

ಸೊರಬ: ತಾಲೂಕಿನ ವಕೀಲರ ಸಂಘ ಅಧ್ಯಕ್ಷರಾಗಿ ಸಿ.ವೈ.ಅಶೋಕ್ ಕೊಡಕಣಿ, ಕಾರ್ಯದರ್ಶಿಯಾಗಿ ಎಸ್.ಅರುಣ್ ತೆಲಗುಂದ್ಲಿ, ಉಪಾಧ್ಯಕ್ಷರಾಗಿ ಮಂಜುಳಾ ಆಯ್ಕೆಯಾದರು. ಖಜಾಂಚಿಯಾಗಿ ಗೋಪಾಲ್ ಅವಿರೋಧವಾಗಿ ಆಯ್ಕೆಗೊಂಡರು.

ಚುನಾವಣೆ ಅಧಿಕಾರಿಗಳಾಗಿ ರಾಮಪ್ಪ ಹಾಗೂ ಕೃಷ್ಣಮೂರ್ತಿ ಕಾರ್ಯ ನಿರ್ವಹಿಸಿದರು. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಕೀಲರು ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷ ಸಿ.ವೈ.ಅಶೋಕ್ ಕೊಡಕಣಿ ಮಾತನಾಡಿ, ವಕೀಲರ ಸಾಂಘಿಕ ಬಲದಿಂದ ಅಭೂತಪೂರ್ವ ಗೆಲುವು ಸಿಕ್ಕಿದ್ದು ಸಂಘದ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ವಕೀಲರ ಹಿತಕಾಯುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇನೆ ಎಂದು ತಿಳಿಸಿದರು. ಸುಧಾಕರ್ ಪಿ.ನಾಯ್ಕ, ಕೆ.ಬಿ.ಬಸವರಾಜ್, ರಂಗನಾಥ ಚಕ್ರಪಾಣಿ, ಟಿ.ಕೆ.ಮಂಚಪ್ಪ, ಲಕ್ಷ್ಮಣ್, ಕೆ.ಎಸ್.ಪರಶುರಾಮ್, ಡಾಕಪ್ಪ ಹೆಸರಿ, ರಾಘವೇಂದ್ರ, ಆನಂದ, ಎಸ್.ಎಲ್.ರವಿ, ಗುರುಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net