

ಪುತ್ತೂರು: 2023-24ನೇ ಸಾಲಿನಲ್ಲಿ 1479.59ಕೋಟಿ ಅನುದಾನ ಪುತ್ತೂರು ಕ್ಷೇತ್ರಕ್ಕೆ ಬಂದಿದ್ದು, ಕೆಲಸಗಳು ಪ್ರಾರಂಭದ ಹಂತದಲ್ಲಿವೆ. ಐದು ಬೆಂಚ್‌ಮಾರ್ಕ್ ಯೋಜನೆಯನ್ನು ಪುತ್ತೂರು ಭಾಗಕ್ಕೆ ಹಾಕಿಕೊಳ್ಳಲಾಗಿದೆ. ಜಿಲ್ಲೆಯ ಜನರು ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಬಜೆಟ್‌ನಲ್ಲಿ ನೀಡುತ್ತಿರುವ ಪಾಲು ಕಡಿಮೆಯಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕುಡಿಯುವ ನೀರಿನ ಯೋಜನೆಯ ಕೆಲಸ ಪ್ರಾರಂಭವಾಗಿದ್ದು, ವೆಟ್‌ವೆಲ್ ನಿರ್ಮಾಣವಾಗಿದೆ. ಅನುದಾನಗಳು ಮಂಜೂರಾಗಿದ್ದು ಎರಡು ತಿಂಗಳಲ್ಲಿ ಟೆಂಡರ್ ಕರೆಯುವ ಕೆಲಸವಾಗಿ, ಕೆಲವು ಎವಾರ್ಡ್ ಆಗಿದೆ. ಸುಮಾರು 200 ಕೋಟಿ ರೂ.ವೆಚ್ಚದ ಕಾಮಗಾರಿ ಅ.26ರ ಬಳಿಕ ಕೆಲಸ ಪ್ರಾರಂಭವಾಗಲಿದೆ. ಪುತ್ತೂರು ಭಾಗದ ಜನರಿಗೆ ಟೆಂಡರ್ ಸಿಗುವ ಮೂಲಕ ಸ್ಥಳೀಯ ಯುವಕರಿಗೆ ಕೆಲಸ ನೀಡುವ ಕನಸು ಇದ್ದು, ಇದರಿಂದ ಕೆಲವೊಂದು ಭಾಗದಲ್ಲಿ ತಡವಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುತ್ತೂರಿನಲ್ಲಿ 3 ಕೋಟಿ ಲೀಟರ್ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಿ, 18 ತಿಂಗಳಲ್ಲಿ ಕಾಮಗಾರಿಯನ್ನು ಮುಗಿಸುವ ಗಡುವು ನೀಡಲಾಗಿದೆ. ಇದಕ್ಕೆ ಶೇ.40ರಷ್ಟು ಹಣವನ್ನೂ ಈಗಾಗಲೇ ಗುತ್ತಿಗೆ ವಹಿಸಿಕೊಂಡವರಿಗೆ ವರ್ಗಾವಣೆ ಮಾಡಲಾಗಿದೆ. ಕೆಎಂಎಫ್ ಹಳೆಯ ಆಡಳಿತಾವಽ ಮುಗಿದು, ಹೊಸದರ ಆಯ್ಕೆ ಬಳಿಕ 15 ಎಕರೆ ಜಾಗದಲ್ಲಿ ಕಾಮಗಾರಿ ನಡೆಸಲಿದ್ದಾರೆ. ಕೊÊಲ ಪಶು ವೈದ್ಯಕೀಯ ಕಾಲೇಜಿಗೆ ಕೇಂದ್ರದಿAದ ಪರಿವಾನಗಿ ಸಿಗದ ಕಾರಣದಿಂದ ಮುಂದಿನ ವರ್ಷ ಪ್ರಾರಂಭಿಸಲಾಗುವುದು. ಒಳಚರಂಡಿಯ ಡಿಪಿಆರ್ ಇನ್ನೂ ಸಿದ್ಧವಾಗದ ಕಾರಣದಿಂದ ತಡವಾಗುತ್ತಿದ್ದು, ಮೂರು ತಿಂಗಳಲ್ಲಿ ಪೂರ್ಣ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮುಂಡೂರು ಸಮೀಪದಲ್ಲಿ 20 ಎಕರೆ ಜಾಗದಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯ 25 ಕೋಟಿಯ ಯೋಜನೆಗೆ ಪ್ರಸ್ತಾವನೆ ನೀಡಲಾಗಿದೆ. ಸರ್ಕಾರಿ ಜಾಗವನ್ನು ಸಂಘಗಳ ಮೂಲಕ ಪಡೆದು ಕೃಷಿ ಚಟುವಟಿಕೆ ನಡೆಸಲು ಅವಕಾಶವಿದೆ. ದೇವಸ್ಥಾನದ ಮಾಸ್ಟರ್ ಪ್ಲಾನ್ ಸರ್ಕಾರಕ್ಕೆ ಅನುಮಾತಿಗಾಗಿ ಕಳುಹಿಸಲಾಗಿದ್ದು, ಮಹಿಳಾ ಠಾಣೆ ಸ್ಥಳಾಂತರಕ್ಕೆ ಬೇರೆ ಕಡೆ ಜಾಗವನ್ನು ಗುರುತಿಸಲಾಗಿದೆ ಎಂದರು.
ಭವಿಷ್ಯದ ಯೋಜನೆಗಳು
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸುವ ಜತೆಗೆ ಕಾಂಕ್ರೀಟ್ ರಸ್ತೆಯಾಗಿ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ರಸ್ತೆ ನಡುವಿನಲ್ಲಿ ಹೂವಿನ ಗಿಡ, ಬದಿಯಲ್ಲಿ ಅಪರೂಪದ ಹಣ್ಣಿನ ಗಿಡಗಳನ್ನು ನೆಡುವ ಕಲ್ಪನೆಯನ್ನು ಇದೆ. ಕಬಕದಿಂದ ವಿಟ್ಲಕ್ಕೆ ಹೋಗುವ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆ, ಪುತ್ತೂರಿಗೆ ರಿಂಗ್ ರಸ್ತೆ ನಿರ್ಮಾಣದ ಪ್ರಸ್ತಾವನೆ ಕಳುಹಿಸಲಾಗಿದೆ. ಹದೆಗೆಟ್ಟು ಹೋದ ರಸ್ತೆಗಳು ಮಳೆ ನಿಂತ ತಕ್ಷಣ ದುರಸ್ತಿ ನಡೆಯಲಿದೆ.
ಐದು ಬೆಂಚ್‌ಮಾರ್ಕ್!
* ಕುಡಿಯುವ ನೀರಿನ ಯೋಜನೆ
* ಹೊಸ ಉದ್ಯಮಗಳನ್ನು ಪರಿಚಯಿಸುವುದು
* ವೈದ್ಯಕೀಯ ಕಾಲೇಜು ನಿರ್ಮಾಣ
* ಪ್ರವಾಸೋದ್ಯಮಕ್ಕೆ ಒತ್ತು
* ಒಳಚರಂಡಿ ವ್ಯವಸ್ಥೆ
12ನೇ ವರ್ಷದ ವಸ್ತç ವಿತರಣೆ:
12 ವರ್ಷದ ಹಿಂದೆ ವಸ್ತ್ರ ನೀಡುವ ಹೊಸ ಸಂಸ್ಕೃತಿಯನ್ನು ಪ್ರಾರಂಭಿಸಲಾಯಿತು. ದೇವರು ಶಕ್ತಿ ನೀಡಿದಷ್ಟು ಸಮಯ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು. ಕೊಂಬೆಟ್ಟು ಪೂರ್ಣ ಮೈದಾನಕ್ಕೆ ಶಾಮಿಯಾನ ಹಾಕುವ ಕಾರ್ಯ ನಡೆಯಲಿದ್ದು, ೩೦೦ ಮಂದಿ ಬಾಣಸಿಗರು ಅಡುಗೆ ಸಿದ್ಧತೆಯನ್ನು ಮಾಡಲಿದ್ದಾರೆ.
ಕಂಬಳ ವಿಚಾರ ಕಾನೂನು ಹೋರಾಟ!
ಬೆಂಗಳೂರಿನಲ್ಲಿ ಕಂಬಳ ನಡೆಸಲು ಅವಕಾಶ ನೀಡದಂತೆ ಪೇಟಾ ಸಂಸ್ಥೆ ಹೈಕೋರ್ಟ್ ಮೆಟ್ಟಲೇರಿದ್ದು, ಇದರ ವಿರುದ್ಧ ವೈಯಕ್ತಿ ನೆಲೆಯಲ್ಲಿ ಕಾನೂನು ಹೋರಾಟ ಮಾಡಲಿದ್ದೇನೆ. ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಂಬಳ ನಡೆಸಲಾಗುತ್ತದೆ ಎಂದು ಅಫಿದವಿತ್ ಸಲ್ಲಿಸಲಾಗಿದ್ದು, ಬೇರೆಲ್ಲೂ ನಡೆಸುವುದಿಲ್ಲ ಎಂದು ಅದರಲ್ಲಿ ಹೇಳಿಲ್ಲ. ಇದರಿಂದ ಮುಂದೆ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ. ಕಂಬಳದ ವಿಚಾರಲ್ಲಿ ಯಾವುದೇ ಆತಂಕವಿಲ್ಲ.