ಅಶೋಕ್ ಅಧ್ಯಕ್ಷ, ಪ್ರಭಾಕರ್ ಉಪಾಧ್ಯಕ್ಷ

11.1
ನುಗ್ಗೇಹಳ್ಳಿ ಹೋಬಳಿಯ ಕಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು. ಲಾಯರ್ ಬಸವರಾಜ್, ಗೋಪಾಲ್‌ಗೌಡ, ಬೈರೇಗೌಡ, ಕುಮಾರಸ್ವಾಮಿ, ಧರ್ಮರಾಜ್, ನಾಗೇಗೌಡ, ರಮೇಶ್, ಕೃಷ್ಣಯ್ಯ ಇದ್ದರು.
Published on

ನುಗ್ಗೇಹಳ್ಳಿ: ಹೋಬಳಿಯ ಕಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೆ. ಎನ್. ಅಶೋಕ್, ಉಪಾಧ್ಯಕ್ಷರಾಗಿ ಕೆ.ಟಿ.ಪ್ರಭಾಕರ್ ಜಯಗಳಿಸಿದರು.

ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಕೆ.ಎನ್.ಅಶೋಕ್, ಕಾಂಗ್ರೆಸ್ ಬೆಂಬಲಿತ ಮರಿಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಕೆ.ಟಿ.ಪ್ರಭಾಕರ್, ಕಾಂಗ್ರೆಸ್ ಬೆಂಬಲಿತೆ ಶಾರದಮ್ಮ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಬೆಂಬಲಿತರಾಗಿದ್ದ ಕೆ.ಎನ್.ಅಶೋಕ್ ಹಾಗೂ ತಲಾ ಪ್ರಭಾಕರ್ 7 ಮತ ಪಡೆಯುವ ಮೂಲಕ ಜಯ ಗಳಿಸಿದರು. ಚುನಾವಣಾ ಅಧಿಕಾರಿಆಯಗಿ ವಾಸಿಂ ಶರೀಫ್ ಕಾರ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷ ಕೆ.ಎನ್.ಅಶೋಕ್ ಮತ್ತು ಉಪಾಧ್ಯಕ್ಷ ಕೆ.ಟಿ.ಪ್ರಭಾಕರ್ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣಅಭಿನಂದಿಸಿ ಮಾತನಾಡಿದರು.

ಕಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲು ಅಧ್ಯಕ್ಷರು ಹೆಚ್ಚು ಶ್ರಮಿಸಬೇಕು. ತಾವು ಜಿಲ್ಲಾ ಸಹಕಾರ ಬ್ಯಾಂಕ್‌ನ ನಿರ್ದೇಶಕರಾಗಿ ತಾಲೂಕಿನ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳಿಗೂ ಹೆಚ್ಚಿನ ಸಹಕಾರ ನೀಡುವ ಮೂಲಕ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ನಿರ್ದೇಶಕರಾದ ಡಿ.ಎಸ್.ಸುರೇಶ್, ಕೆ.ಎಸ್. ದೇವರಾಜ್, ಸುಧಾ ಹರೀಶ್, ಪುಷ್ಪಾ ರಮೇಶ್, ಡಿ. ಎನ್.ಮಂಜುನಾಥ್, ಬಸವರಾಜ್, ರಾಜಮ್ಮ, ಡಿ.ಆರ್. ಧನಂಜಯ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷರಾದ ಈ.ಶಿವಣ್ಣ, ಗೋಪಾಲ್‌ಗೌಡ, ಕೆ.ಆರ್.ಧರ್ಮರಾಜ್, ಮುಖಂಡರಾದ ಕುಂಬಾರಹಳ್ಳಿ ರಮೇಶ್, ಲಾಯರ್ ಬಸವರಾಜ್, ಸಾತೇನಹಳ್ಳಿ ಆನಂದ್, ಕುಮಾರಸ್ವಾಮಿ, ಸೋಂಬೇಗೌಡ, ಬೈರೇಗೌಡ, ನಾಗೇಗೌಡ, ಚೌಡೇನಹಳ್ಳಿ ರಮೇಶ್, ಡಿ.ಟಿ.ನಾಗಣ್ಣ, ಧರ್ಮ(ಅಪ್ಪಿ), ಲಾಯರ್ ಹರೀಶ್, ಸುಬ್ಬಶೆಟ್ಟಿ, ಕೃಷ್ಣಯ್ಯ, ಕಲ್ಕೆರೆ ಮೋಹನ್, ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಮಧು, ಕೃಷಿ ಪತ್ತಿನ ಕಾರ್ಯ ನಿರ್ವಹಣಾಧಿಕಾರಿ ಕೆ.ಶರ್ಮ ಸಿಬ್ಬಂದಿಗಳಾದ ಶಕುಂತಲಾ, ಪ್ರಮೋದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net