ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ನಿಧನಕ್ಕೆ ಸವಿತಾ ಸಮಾಜದಿಂದ ಶ್ರದ್ಧಾಂಜಲಿ

Gasti
Published on

ಬೆಂಗಳೂರು: ಇತ್ತೀಚೆಗಷ್ಟೆ ಮಹಾಮಾರಿ ಕರೊನಾ ಸೋಂಕಿನಿಂದ ಅಕಾಲ ಮರಣ ಹೊಂದಿದ ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿಯವರ ನಿಧನಕ್ಕೆ ಸವಿತಾ ಸಮಾಜದ ವತಿಯಿಂದ ಸ್ಮರಣೆ ಮತ್ತು ಮೌನಾಚರಣೆಯನ್ನು ಮೇಣದ ಬತ್ತಿ ಹಚ್ಚುವ ಮೂಲಕ ಮಾಡಲಾಯಿತು.

ಭಾರತೀಯ ಇತಿಹಾಸದಲ್ಲೇ ಒಬ್ಬ ಸಾಮಾನ್ಯ ಕಾಯ೯ಕತ೯ನನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿದ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಕ್ಕೆ ಸಲ್ಲುತ್ತದೆ. ಅದರಲ್ಲೂ ಅತ್ಯಂತ ಹಿಂದುಳಿದ ಶೋಷಿತ ಸಮಾಜವಾದ ಸವಿತಾ ಸಮಾಜದ ಸಾಮಾನ್ಯ ಕಾಯ೯ಕತ೯ರಾದ ಶ್ರೀ ಅಶೋಕ ಗಸ್ತಿ ಅವರನ್ನು ನೇಮಕ ಮಾಡಿದ್ದು ಹೊಸ ಚರಿತ್ರೆ ಸೃಷ್ಟಿಯಾಗಿತ್ತು.

ಗಸ್ತಿಯವರು ಪಕ್ಷದ ಅನೇಕ ಹುದ್ದೆಗಳನ್ನು ನಿಭಾಯಿಸಿ ಕೊನೆಗೆ ಅವರ ಸತತ ಪ್ರಯತ್ನ ಮತ್ತು ಪ್ರಾಮಾಣಿಕತೆಗೆ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ನಾಮ ನಿರ್ದೇಶನವಾದರು. ಆದರೆ ವಿಧಿಯಾಟ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆದ ಕೇವಲ ಮೂರು ತಿಂಗಳಲ್ಲಿಯೇ ಅವರ ಬಾಳ ಪಯಣ ಮುಗಿಸಿದರು,.

ಗಸ್ತಿಯವರ ಅಕಾಲಿಕ ಮರಣದಿಂದ ಸವಿತಾ ಸಮಾಜಕ್ಕೆ ತುಂಬಾಲಾರದ ನಷ್ಟ ಆಗಿದೆ. ಅವರಿಂದ ನಮ್ಮ ಸವಿತಾ ಸಮಾಜದ ಗತ್ತೆ ಬದಲಾಗಿತ್ತು. ಈಗ ಅವರು ನೆನಪು ಮಾತ್ರ. ಈ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ಸಂಜೆ ಗಂಟೆಗೆ ಮೌಯ೯ ಸಕ೯ಲ್​ನ ಗಾಂಧಿ ಪ್ರತಿಮೆಯ ಆವರಣದಲ್ಲಿ ಗಸ್ತಿಯವರ ಸ್ಮರಣೆ ಮತ್ತು ಮೌನಾಚರಣೆಯನ್ನು ಮೇಣದ ಬತ್ತಿ ಹಚ್ಚುವ ಮೂಲಕ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜ ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷರಾದ ಸಾಮ್ರಾಟ್ ಮಂಜು, KPSC ಸದಸ್ಯರಾದ ಡಾ ಎಮ್. ಡಿ. ಲಕ್ಷ್ಮಿ ನಾರಾಯಣ, ಭಾರತೀಯ ಜನತಾಪಕ್ಷದ ಎನ್. ನರೇಶ್ ಕುಮಾರ್, ಕನಾ೯ಟಕ ರಾಜ್ಯ ಸವಿತಾ ಸಮಾಜ ಕಾಯ೯ಧ್ಯಕ್ಷರಾದ ಎಸ್. ಕಿರಣಕುಮಾರ್​, ದೇವರಾಜ್ ಅರಸು ಹಿಂದುಳಿದವರ ವರ್ಗ ಹಾಗು ಸಮಾಜದ ಮಾಜಿ ನಿರ್ದೇಶಕರಾದ ಪ್ರೊಫೆಸರ್ ಎನ್.ವಿ. ನರಸಿಂಹಯ್ಯನವರು ಸೇರಿದಂತೆ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಮತ್ತು ಸವಿತಾ ಸಮಾಜದ ಅಪಾರ ಅಭಿಮಾನಿ ಬಂಧುಗಳು ಈ ಒಂದು ಸ್ಮರಣೆ ಮತ್ತು ಮೌನಾಚರಣೆ ಯಲ್ಲಿ ಪಾಲ್ಗೋಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net