

ಹುಬ್ಬಳ್ಳಿ: ನಗರದ ಶಿರೂರ ಪಾರ್ಕ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಆಶ್ಲೇಷ ಬಲಿ ಪೂಜೆಯನ್ನು ವಿಧ್ಯುಕ್ತವಾಗಿ ನೆರವೇರಿಸಲಾಯಿತು.
ಅರ್ಚಕ ಅಜಿತ್ ಭಟ್ ನೇತೃತ್ವದಲ್ಲಿ ಹೋಮ-ಹವನಗಳು ನಡೆದವು.
ಮದುವೆ ಭಾಗ್ಯ, ಸಂತಾನ ಪ್ರಾಪ್ತಿ, ನಾಗದೋಷ ನಿವಾರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಕೋರಿ 150ಕ್ಕೂ ಹೆಚ್ಚು ಜನರು ಆಶ್ಲೇಷ ಬಲಿ ಪೂಜೆಯಲ್ಲಿ ಭಾಗಿಯಾದರು.
ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಅಧ್ಯಕ್ಷ ಆನಂದ ಸಂಕೇಶ್ವರ ಅವರು ಪೂರ್ಣಾಹುತಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ, ಧರ್ಮದರ್ಶಿ ಆನಂದ ಗುರುಸ್ವಾಮಿ ಸಾಥ್ ನೀಡಿದರು.
ಪ್ರಮುಖರಾದ ವಿನಯ ಹುಲ್ಲೂರ, ಪ್ರಕಾಶ ರಾಯ್ಕರ, ಆರ್.ಟಿ. ರೇವಣಕರ, ಮಲ್ಲು ಸ್ವಾಮಿ, ಜಿ.ಎಸ್. ಅಯ್ಯರ್ ಇತರರು ಭಾಗಿಯಾಗಿದ್ದರು.