ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ

ashakirana
Published on

ಮಡಿಕೇರಿ:

ಅಂಧತ್ವ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ರಾಜ್ಯದಲ್ಲಿ ಜಾರಿಗೆ ಬಂದಿರುವ ಆಶಾಕಿರಣ ಯೋಜನೆ ಜಿಲ್ಲೆಯಲ್ಲೂ ಕಾರ್ಯ ನಿರ್ವಹಿಸಲಿದೆ ಎಂದು ಅಂಧತ್ವ ನಿವಾರಣ ಕಾರ್ಯಕ್ರಮದ ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ. ಆನಂದ್ ಹೇಳಿದರು. ಸೋಮವಾರಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟಿಸಿದ ಗುರುವಾರ ಮಾತನಾಡಿದರು.

ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಆಶಾಕಿರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದಲ್ಲಿ 393 ಆರೋಗ್ಯ ಸಂಸ್ಥೆಗಳಲ್ಲಿ ಆಶಾಕಿರಣ ದೃಷ್ಟಿ ಕೇಂದ್ರಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಬಿಎಂಪಿ ವಲಯದ ಬೆಂಗಳೂರಿನ ಹೊಸಹಳ್ಳಿ ಆಸ್ಪತ್ರೆಯಲ್ಲಿ ಉದ್ಘಾಟಿಸಿದರು. ನಂತರ ಕೊಡಗಿನಲ್ಲೂ ವೈದ್ಯಕೀಯ ಕಾಲೇಜು, ಸಮುದಾಯ ಆರೋಗ್ಯ ಕೇಂದ್ರ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಟ್ಟು ಎಂಟು ಕಡೆ ಏಕಕಾಲದಲ್ಲಿ ಉದ್ಘಾಟಿಸಲಾಗಿದೆ.

ಕೊಡಗಿನಲ್ಲಿ ಏಪ್ರಿಲ್ ತಿಂಗಳಿನಿAದ ಇಲ್ಲಿಯವರೆಗೆ 4,750 ಫಲಾನುಭವಿಗಳಿಗೆ ದೃಷ್ಟಿ ಪರೀಕ್ಷೆ ಮಾಡಲಾಗಿದೆ. 851 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. 114 ಫಲಾನುಭವಿಗಳಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಆಶಾ ಕಿರಣ ಕಾರ್ಯಕ್ರಮದ ಮೂಲ ಉದ್ದೇಶಗಳು ರಾಜ್ಯವನ್ನು ಮತ್ತು ಜಿಲ್ಲೆಯನ್ನು ಅಂಧÀತ್ವ ಮುಕ್ತ ಮಾಡುವುದಾಗದೆ. ಆಶಾಕಿರಣ ಯೋಜನೆಯನ್ನು ಶಾಶ್ವತವಾಗಿ ಮತ್ತು ಉಚಿತವಾಗಿ ಸಾರ್ವಜನಿಕರಿಗೆ ಸದುಪಯೋಗವಾಗುವಂತೆ ವ್ಯವಸ್ಥೆ ಮಾಡಲು ಈ ಕಾರ್ಯಕ್ರಮವನ್ನು ಏಕಕಾಲದಲ್ಲಿ ಉದ್ಘಾಟಿಸಲಾಗಿದೆ.

ದೃಷ್ಟಿ ದೋಷ, ಕಣ್ಣಿನ ಸಮಸ್ಯೆ ಇದ್ದಲ್ಲಿ ಉಚಿತವಾಗಿ ಪರೀಕ್ಷೆ ಮಾಡಲಾಗುವುದು. ದೃಷ್ಟಿ ದೋಷ ಇದ್ದಲ್ಲಿ ಉಚಿತ ಕನ್ನಡಕ ವಿತರಿಸಲಾಗುವುದು. ಕಣ್ಣಿನ ಪೊರೆ ಇದ್ದಲ್ಲಿ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಡಯಾಬಿಟಿಕ್ ರೆಟಿನೋಪತಿ ಇದ್ದಲ್ಲಿ ಉನ್ನತ ಮಟ್ಟಕ್ಕೆ ಉನ್ನತ ಚಿಕಿತ್ಸೆಗೆ ಉಚಿತವಾಗಿ ರೆಫರ್ ಮಾಡಲಾಗುವುದು ಎಂದು ತಿಳಿಸಿದರು.

ಡಾ. ಜಮೀರ್, ಡಾ. ಶಿವಪ್ರಸಾದ್, ಡಾ. ಕಿರಣ್, ಡಾ. ಅಫ್ರೀನಾ, ಮೀನಾಕ್ಷಿ ನೇತ್ರಾಧಿಕಾರಿ ಚೇತನ್ ಮತ್ತು ಸಿಬ್ಬಂದಿ ವರ್ಗ ಇದ್ದರು

ಕುಶಾಲನಗರ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರ ಚಿಕಿತ್ಸಕರು ಮತ್ತು ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್ ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟಿಸಿದರು. ಡಾ. ಶಿವಕುಮಾರ್, ಡಾ. ಕೀರ್ತಿರಾಜ್, ಡಾ. ಪ್ರತಿಭಾ, ಡಾ.ಅಂಜಲಿ ಕೃಷ್ಣಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ,ನೇತ್ರಾಧಿಕಾರಿ ಆದರ್ಶ್, ಸಿಬ್ಬಂದಿ ಷಣ್ಮುಖ, ವಿಶು ಕುಮಾರ್ ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net