ಗಂಗೊಳ್ಳಿ ದೇವಳದಲ್ಲಿ ಆಷಾಢ ಏಕಾದಶಿ ಪೂಜೆ

ekadashi
ಗಂಗೊಳ್ಳಿ ಪೇಟೆ ಶ್ರೀವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ವಿಶೇಷ ಪುಷ್ಪಾಲಂಕೃತಗೊಂಡಿರುವ ದೇವರು
Published on

ಗಂಗೊಳ್ಳಿ: ಗಂಗೊಳ್ಳಿ ಪೇಟೆ ಶ್ರೀವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಬುಧವಾರ ಜರುಗಿತು.

ಆಷಾಢ ಏಕಾದಶಿ ಅಂಗವಾಗಿ ಬುಧವಾರ ಸಂಜೆ ಅಭಿಷೇಕ, ವಿಶೇಷ ಪುಷ್ಪಾಲಂಕಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಏಕಾದಶಿ ಭಜನೆ, ಏಕಾದಶಿ ಪೂಜೆ, ಜಾಗರಣೆ ಭಜನೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ದೇವಸ್ಥಾನ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಮತ್ತು ಜಿ.ಪ್ರದೀಪ ಭಟ್ ನೇತೃತ್ವದಲ್ಲಿ ನಡೆಯಿತು. ಯು.ಸದಾನಂದ ಮಾಧವ ಪೈ ಮತ್ತು ಕುಟುಂಬಸ್ಥರು, ಶ್ರೀ ವಿಠಲ ರಕುಮಾಯಿ ಸೇವಾ ಸಮಿತಿ ಹಾಗೂ ಹತ್ತು ಸಮಸ್ತರು ಸೇವೆ ಸಮರ್ಪಿಸಿದರು.

ಇಂದು ಲಕ್ಷ ಪ್ರದಕ್ಷಿಣೆ ಸೇವೆ ಮಂಗಲಾಚರಣೆ ನಡೆಯಿತು. ಮಧ್ಯಾಹ್ನ ದೇವರಿಗೆ ವಿಶೇಷ ಪೂಜೆ, ಮಹಾಸಮಾರಾಧನೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು. ದಿ.ಸುಲೋಚನಾ ಸುಬ್ರಾಯ ಶೆಣೈ ಸ್ಮರಣಾರ್ಥ ಮಕ್ಕಳು ಸೇವೆ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net