ಮಾಸಿಕ ಕನಿಷ್ಠ 10 ಸಾವಿರ ಗೌರವಧನ ನೀಡಿ: ಆಶಾ ಕಾರ್ಯಕರ್ತೆಯರ ಒತ್ತಾಯ

Asha
Published on

ಕಾರವಾರ:ಮಾಸಿಕ ಕನಿಷ್ಠ 10 ಸಾವಿರ ರೂ. ಗೌರವಧನ ಒದಗಿಸಬೇಕು ಎಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಕೈಗೊಂಡಿರುವ ಹೋರಾಟ ಮೂರನೇ ದಿನ ತಲುಪಿದೆ. ನೂರಾರು ಆಶಾ ಕಾರ್ಯಕರ್ತೆಯರು ಗುರುವಾರ ಸುರಿಯುವ ಮಳೆಯಲ್ಲಿ ನಗರದ ನೇತಾಜಿ ಸುಭಾಷ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ ಮೆರವಣಿಗೆ ನಡೆಸಿ, ಡಿಎಚ್‌ಒ ಡಾ.ನೀರಜ್ ಅವರ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆ ಪತ್ರ ಸಲ್ಲಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಎಸ್‌ಯುಸಿಐ ಕಮ್‌ಉನಿಸ್ಟ್ ಪಕ್ಷದ ಜಿಲ್ಲಾ ಮುಖಂಡ ಗಣಪತಿ ಹೆಗಡೆ, ಇಂದು ನಮ್ಮನ್ನು ಆಳುತ್ತಿರುವ ಪಕ್ಷಗಳು ಬಂಡವಾಳಗಾರರ ಹಿತಾಸಕ್ತಿಯನ್ನು ಕಾಪಾಡುತ್ತಿವೆ. ಕಾರ್ಮಿಕರ, ರೈತರ, ಕೃಷಿ ಕಾರ್ಮಿಕರ ಹಿತವನ್ನಲ್ಲ. ಎಲ್ಲ ಎಂಎಲ್‌ಎ, ಎಂಪಿಗಳ ವೇತನ ದುಪ್ಪಟ್ಟಾಗಿದೆ. ಆದರೆ, ಅರ‍್ಯಾರೂ ಕಾರ್ಮಿಕರ ಬವಣೆಗೆ ಸ್ಪಂದಿಸುತ್ತಿಲ್ಲ ಎಂದು.

ಆಶಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಂಗೀತಾ ಗುರಂಕೊಳ್ಳ ಸಂಘಟನೆಯ ಮಿತಿಯನ್ನು ಹೆಚ್ಚಿಸಿ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ವಜಾಗೊಳಿಸುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿರುವುದು ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು.

ಎಸ್‌ಐಸಿಯು ಕಮ್ಯುನಿಷ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ, ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮಾ ಚಲವಾದಿ, ಶ್ವೇತಾ ಕಪಡಸ್ಕರ್, ನಿವೇದಿತಾ ಕೊಳಂಬಕರ್, ಚಂದ್ರಕಲಾ, ಹಾಲಮ್ಮ, ಶೋಭಾ ನಾಯಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net