ಕನಿಷ್ಠ 10 ಸಾವಿರ ರೂ. ವೇತನ ನಿಗದಿಗೆ ಆಶಾ ಕಾರ್ಆಯಕರ್ಗ್ರತೆಯರ ಹ

Asha Strike
Published on

ಕಾರವಾರ: ಘೋಷಿಸಿದ ಭರವಸೆಯಂತೆ ಏಪ್ರಿಲ್ 1 ರಿಂದ 10 ಸಾವಿರ ರೂ. ಕನಿಷ್ಠ ಗೌರವಧನ ನೀಡುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಡಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯ ಎದುರು ಸೇರಿ ಘೋಷಣೆ ಕೂಗಿದರು. ನಂತರ ತಮ್ಮ ಬೇಡಿಕಗಳ ಪತ್ರವನ್ನು ಜಿಲ್ಲಾಧಿಕಾರಿ ಅವರು ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಆಯವ್ಯಯದಲ್ಲಿ ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಯಕರ್ತೆಯರಿಗೆ ತಲಾ 1 ಸಾವಿರ ರೂ. ಗೌರವಧನ ಹೆಚ್ಚಿಸಿದಂತೆ 42 ಸಾವಿರ ಆಶಾ ಕಾರ್ಯಕರ್ತೆಯರಿಗೂ ಗೌರವಧನ ಹೆಚ್ಚಿಸಬೇಕು. 10 ಸಾವಿರ ರೂ. ಕನಿಷ್ಠ ಗೌರವಧನ ಹೊರತುಪಡಿಸಿ ಕಾಂಪೋನೆAಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ನೀಡಬೇಕು. ಒಮ್ಮೆ ಕಡಿಮೆ ಬಂದಿದ್ದಲ್ಲಿ ಅಂತಹ ಕಾರ್ಯಕರ್ತೆಯರಿಗೆ ಸರ್ಕಾರವೇ ವ್ಯತ್ಯಾಸದ ಹಣ ಪಾವತಿಸಿ, ಕನಿಷ್ಠ ವೇತನ ನೀಡಬೇಕು. ಕೂಡಲೇ ಆಶಾ ಕಾರ್ಯಕರ್ತೆಯರು ಸಭೆ ಮಾಡಿ ಸುಗಮಗಾರರನ್ನು ಹಾಗೂ 60 ವರ್ಷದ ಆದಾ ಆಶಾ ಕಾರ್ಯಕರ್ತೆಯರನ್ನು ಕೆಲಸವನ್ನು ಕೊನೆಗಾಣಿಸುವ ನಿರ್ಣಯವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಗಂಗಾಧರ ಬಡಿಗೇರ ನೇತೃತ್ವದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮಾ ಚಲುವಾದಿ, ಕವಿತಾ ಗಾವಡಾ, ಅನ್ನಪೂರ್ಣಾ ನಾಯ್ಕ, ಆಶಾ ಭಂಡಾರಕರ್, ಸುಷ್ಮಾ ಮಡಿವಾಳ, ನಾಗರತ್ನಾ ಚಿಗಳ್ಳಿ, ಶ್ವೇತಾ ಪಾಪಡಸ್ಕರ್, ನಿವೇದಿತಾ ಕೊಳಂಬಕರ್, ರಾಽಕಾ ನಾಯ್ಕ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net