ಆಶಾ ಕಾರ್ಯಕರ್ತೆಯರ ಧರಣಿ ಅಂತ್ಯ

ASHA workers' sit-in ends
Published on

ವಿಜಯಪುರ:ಕನಿಷ್ಠ ವೇತನ ಸೇರಿ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದ ಬಳಿ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಆಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ತಾತ್ಕಾಲಿಕವಾಗಿ ಅಂತ್ಯವಾಯಿತು.ಬೆಂಗಳೂರಿನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಹೋರಾಟ ಸ್ಥಳಕ್ಕೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾಕಾರರ ಜತೆಗೆ ಚರ್ಚೆ ಮಾಡಿ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದು, ಹೀಗಾಗಿ ಧರಣಿ ಹಿಂಪಡೆಯಲಾಯಿತು.

ಸರ್ಕಾರಿ ನೌಕರರ ಸಂದ ನಿವೃತ್ತ ಅಧಿಕಾರಿ ಸುರೇಶ್​ ಜೆ.ವಿ.ಮಾತನಾಡಿ, ಕನಿಷ್ಠ ಜೀವನ ನಡೆಸಲು 15 ಸಾವಿರ ರೂ. ಸಂಬಳ ಪ್ರತಿಯೊಬ್ಬ ನೌಕರನಿಗೂ ಬೇಕು. ಹಳ್ಳಿ, ಗ್ರಾಮೀಣ ಮಟ್ಟದಲ್ಲಿ ಸಮುದಾಯದ ಆರೋಗ್ಯ ಸುಧಾರಿಸಲು ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೇವಲ 10 ಸಾವಿರ ಸಂಬಳ ನೀಡುತ್ತಿಲ್ಲ. ಸದ್ಯದ ದಿನಗಳಲ್ಲಿ ದುಬಾರಿ ಬೆಲೆ ಏರಿಕೆ, ಶಿಕ್ಷಣ ಮಾರಾಟವಾಗುವ ಸಂದರ್ಭದಲ್ಲಿ ಮಹಿಳೆಯರು ಹೇಗೆ ಬದುಕು ಕಟ್ಟಿಕೊಳ್ಳಬೇಕು ಎಂದು ಸರ್ಕಾರಕ್ಕೆ ಪ್ರಶ್ನಿಸಿದ ಅವರು, ಆರ್ಥಿಕವಾಗಿ ಮೇಲೆ ಬರಲು ಸರಿಯಾಗಿ ಸಂಬಳ ನೀಡಬೇಕು.ಅಲ್ಲದೆ, ಗೌರವ ನತೆಯಿಂದ ಬದುಕುವಷ್ಟು ಹಣ ನೀಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಮುಖಂಡ ಲಕ್ಷ$್ಮಣ ಹಂದ್ರಾಳ ಮಾತನಾಡಿ, ಕಾರ್ಮಿಕರ ಪರ ನೀತಿಗಳು ಜಾರಿಗೊಳ್ಳಬೇಕು. ತಮ್ಮ ಆರೋಗ್ಯವನ್ನು ಕಡೆಗಣಿಸಿ ಆರೋಗ್ಯ ಸೇವೆಯಲ್ಲಿ ತೊಡಗಿರುವ ನಿಮಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ಅಲ್ಲಿಯವರೆಗೂ ನಿಮ್ಮ ಜತೆಗೆ ನಮ್ಮ ಕಾರ್ಮಿಕ ಸಂಟನೆ ಇರುತ್ತದೆ ಎಂದು ಬೆಂಬಲ ನೀಡಿದರು.ಜಮಾತ್​&ಇ ಸ್ಲಾಂ ಅಧ್ಯಕ್ಷ ಎಂ.ಎ. ಬಳಗನೂರ, ಅಂಗನವಾಡಿ ನೌಕರರ ಸಂದ ಜಿಲ್ಲಾ ಉಪಾಧ್ಯಕ್ಷ ನಿಂಗಮ್ಮ ಹಿರೇಮಠ ಹಾಗೂ ಎಐಡಿಎಸ್​ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ಯುವಜನ ಸಂಟನೆ ಜಿಲ್ಲಾ ಕಾರ್ಯದರ್ಶಿ ಸಿದ್ದರಾಮ ಹಿರೇಮಠ, ದಲಿತ ಸಂಟನೆಯ ಚೆನ್ನು ಕಟ್ಟಿಮನಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.

ಜಿ.ಪಂ.ಸಿಇಒ ರಿಷಿ ಆನಂದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮನವಿ ಪತ್ರ ಸ್ವೀಕರಿಸಿ ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಕಳುಹಿಸುವ ಜತೆಗೆ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.ಆಶಾ ಜಿಲ್ಲಾ ನಾಯಕರಾದ ಭಾರತಿ ದೇವಕತೆ, ಅಂಬಿಕಾ ವಳಸಂಗ, ಲೈಲಾ ಪಠಾಣ, ಲಕ್ಷಿ$್ಮ ಸಿಮಿಕೇರಿ, ಮಲ್ಲಮ್ಮ ಕಂಠಿ, ಮಲ್ಲಮ್ಮ ಹರಿಜನ, ಸುಮಂಗಲ ಪಡಸಾಲಿ ಸೇರಿದಂತೆ 600 ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ವಿಜಯಪುರದ ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದ ಬಳಿ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಜಿ.ಪಂ. ಸಿಇಒ ರಿಷಿ ಆನಂದ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಭಾರತಿ ದೇವಕತೆ, ಅಂಬಿಕಾ ವಳಸಂಗ, ಲೈಲಾ ಪಠಾಣ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net