ಆಶಾ ಕಾರ್ಯಕರ್ತೆಯರ ಧರಣಿ ಅಂತ್ಯ

Asha Workers protest - 1
Published on

ಬೆಂಗಳೂರು: ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಎಐಟಿಯುಸಿ ನೇತೃತ್ವದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮೂಲಕ ಮಳೆಯನ್ನೂ ಲೆಕ್ಕಿಸದೆ ಆಶಾಗಳು ಕೈಗೊಂಡಿದ್ದ ಮೂರು ದಿನಗಳ ಆಹೋರಾತ್ರಿ ಧರಣಿ ಗುರುವಾರ ಅಂತ್ಯಗೊಂಡಿದೆ. ಆದರೆ ಸರ್ಕಾರದ ವಿರುದ್ಧ ತೀವ್ರ ಹೋರಾಟಕ್ಕೆ ಸಜ್ಜಾಗಲು ನಿರ್ಧರಿಸಿದೆ.

ಹೋರಾಟದ ಫಲವಾಗಿ ಸರ್ಕಾರ ಆಶಾ ಕಾರ್ಯಕರ್ತೆಯರ ಸಂಖ್ಯೆಯನ್ನು ಮಿತಿಗೊಳಿಸಿ ವಜಾಗೊಳಿಸುವ ತೀರ್ಮಾನ ಹಿಂಪಡೆಯುವುದಾಗಿ ತಿಳಿಸಿದೆ. ಗ್ರಾಮೀಣ ಭಾಗದಲ್ಲಿ 1 ಸಾವಿರ ಜನಸಂಖ್ಯೆಗೆ ಹಾಗೂ ನಗರ ಭಾಗದಲ್ಲಿ 2 ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತೆ ಇರುವಂತೆ ಮಾರ್ಗಸೂಚಿಗೆ ಬದ್ಧವಾಗಿರುವುದಾಗಿ ತಿಳಿಸಿರುವುದು ಸ್ವಾಗತಾರ್ಹ. ಆದರೆ ಇದಕ್ಕೆ ತಕ್ಕಂತೆ ಇಲಾಖೆ ನಡೆಸುಕೊಳ್ಳುವ ಬಗ್ಗೆ ಕಾರ್ಯಕರ್ತೆಯರು ಜಾಗರೂಕರಾಗಿರಬೇಕು ಎಂದು ಸಂಘದವು ಕರೆ ನೀಡಿದೆ.

ಗೌರವಧನ ಕನಿಷ್ಠ 10 ಸಾವಿರ ಇರುವಂತೆ ಬಜೆಟ್‌ನಲ್ಲಿ ಖಾತ್ರಿಗೊಳಿಸಿದ್ದು ಇನ್ನು ಅನುಷ್ಠಾನಕ್ಕೆ ಬಂದಿಲ್ಲ. ಆದರೆ, ಸಚಿವರು ಈ ಸಂಬಂಧ ಸುಳ್ಳು ಹೇಳಿಕೆ ನೀಡಿದ್ದಾರೆ. ಇನ್ನು ಕೇಂದ್ರದ ಪ್ರೋತ್ಸಾಹಧವನ್ನು ಪ್ರತ್ಯೇಕವಾಗಿಯೇ ಜಾರಿಗೊಳಿಸಬೇಕು. ಹೀಗಾಗಿ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘದ ರಾಜ್ಯ ಉಪಾಧ್ಯಕ್ಷೆ ಟಿ.ಸಿ. ರಮ್ಯಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net