ವೇತನ ಹೆಚ್ಚಳಕ್ಕೆ ಆಶಾ ಕಾರ್ಯಕರ್ತೆಯರ ಪಟ್ಟು

IMG_20221224_115138-05
Published on

ಚಿತ್ರದುರ್ಗ: ವೇತನ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ದರು.

ಗಾಂಧಿ ವೃತ್ತದಿಂದ ವೀರ ವನಿತೆ ಒನಕೆ ಓಬವ್ವನ ವೃತ್ತದವರೆಗೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಆಶಾ ಕಾರ‌್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಗಿರಿಜಮ್ಮ ಮಾತನಾಡಿ,ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಾರ್ಯಕರ್ತೆಯರು ನಡೆಸಿದ ಅನೇಕ ಹೋರಾಟಗಳನ್ನು ಸರ್ಕಾರ ಕಡೆಗಣಿಸಿದೆ ಎಂದು ದೂರಿದರು.

ಗೌರವಧನದ ಹೆಸರಲ್ಲಿ ಕಾರ್ಯಕರ್ತೆಯರನ್ನು ಸರ್ಕಾರವೇ ಶೋಷಿಸುತ್ತಿದೆ. ಉದ್ಯೋಗ ಭದ್ರತೆ ಇಲ್ಲದೆ ಏಳೆಂಟು ಸಾವಿರ ರೂ.ಗಳಲ್ಲಿ ಜೀವನ ಸಾಗಿಸುವುದು ಕಷ್ಟವಾಗಿದೆ ಎಂದರು.

ಮಾಸಿಕ ವೇತನ 12 ಸಾವಿರ ರೂ.ಗೆ ನಿಗದಿ ಪಡಿಸಿ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು.ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ 3 ಲಕ್ಷ ರೂ.ನೀಡಬೇಕು, ಹೆಚ್ಚುವರಿ ಕೆಲಸಗಳಿಗೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು. ರವಿಕುಮಾರ್, ಮಂಜುಳಕ್ಕ, ಗುರುಶಾಂತ, ಲಕ್ಷ್ಮೀ, ಮೀನಾಕ್ಷಿ ಮಹಾದೇವಿ, ರತ್ನಮ್ಮ, ಬೋರಮ್ಮ, ಸುಜಾತಾ, ಕುಮುದಾ, ಲಿಂಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net