

ಶಿರ್ವ: ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಸರೆ ಸಮಾಲೋಚನಾ ಘಟಕದ ವತಿಯಿಂದ ಉಡುಪಿ ಆಶಾನಿಲಯ ವಿಶೇಷ ಚೇತನ ಮಕ್ಕಳ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದರು.
ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿಶೇಷ ಚೇತನ ಮಕ್ಕಳೊಂದಿಗೆ ಸಂವಾದ ನಡೆಸಿ ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆ ತಿಳಿದುಕೊಂಡರು. ನೃತ್ಯ, ಸಂಗೀತ ಮುಂತಾದ ಮನೋರಂಜನಾ ಕಾರ್ಯಕ್ರಮ ನಡೆಸಿ ವಿಶೇಷ ಚೇತನ ಮಕ್ಕಳನ್ನು ಮನೋರಂಜಿಸಿದರು ಹಾಗೂ ಸಿಹಿತಿಂಡಿ ವಿತರಿಸಿದರು.
ಗಣಕ ಯಂತ್ರ ವಿಭಾಗದ ಸಮಾಲೋಚನ ಘಟಕದ ಸದಸ್ಯ ಡಾ.ಸದಾನಂದ್ ಎಲ್. ಮತ್ತು ಯಶಸ್ವಿನಿ ಎ.ಎಸ್., ಆಶಾ ನಿಲಯದ ಸಿಬ್ಬಂದಿ ಉಪಸ್ಥಿತರಿದ್ದರು.