ಆಶಾ ಕಾರ್ಯಕರ್ತೆಯರಿಗೆ ನ್ಯಾಯಯುತ ವೇತನ - ಕಾರ್ಯಕರ್ತೆಯರ ಜಂಟಿ ಸಮಾವೇಶದಲ್ಲಿ ಆಗ್ರಹ

PTR_9 SEP_1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;
Published on


ಪುತ್ತೂರು: ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಜನರ ಜೀವ ಉಳಿಸಲು ನಿತ್ಯ ದುಡಿಯುತ್ತಿದ್ದರೂ ಅವರಿಗೆ ಬದುಕಲು ತಕ್ಕ ಸಂಬಳ ನೀಡದಿರುವುದು ಸರ್ಕಾರ ಮಾಡುವ ಅಕ್ಷಮ್ಯ ಅಪರಾಧವಾಗಿದೆ. ದಿನಬೆಳಗಾದರೆ ರಾಜಕೀಯ ಮಾತನಾಡುವವರು ನಿತ್ಯದುಡಿಯುವ ಆಶಾ ಕಾರ್ಯಕರ್ತೆಯರ ಬದುಕಿನ ರಾಜಕೀಯದ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಸಿಐಟಿಯು ಮುಖಂಡ ಪಿ. ಕೆ. ಸತೀಶನ್ ಪ್ರಶ್ನಿಸಿದರು.


ಪುತ್ತೂರು ಮಾಜಿ ಸೈನಿಕರ ಭವನದಲ್ಲಿ ಸಿಐಟಿಯು ನೇತೃತ್ವದಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ಆಶಾ ಕಾರ್ಯಕರ್ತೆಯರ ಜಂಟಿ ಸಮಾವೇಶದಲ್ಲಿ ಮಾತನಾಡಿದರು.


ಮುಖಂಡ ಬಿ.ಎಂ.ಭಟ್ ಮಾತನಾಡಿ, ಶಿಶು ಮರಣ, ತಾಯಿ ಮರಣದ ಪ್ರಮಾಣವನ್ನು ಇಳಿಸಿದ ಕೀರ್ತಿ ಆಶಾ ಕಾರ್ಯಕರ್ತೆಯರಿಗಿದ್ದರೂ, ಸರ್ಕಾರ ತಮ್ಮ ಎದೆಯನ್ನು ತಾವೇ ತಟ್ಟಿಕೊಳ್ಳುತ್ತಿದೆ. ಆಶಾ ಕಾರ್ಯಕರ್ತೆಯರ ಬದುಕು ಇವರಿಗೆ ಬೇಡವಾಗಿದೆ. ಸಿಐಟಿಯು ನೇತೃತ್ವದಲ್ಲಿ ಬಲಿಷ್ಟವಾಗಿ ಸಂಘಟನೆ ಕಟ್ಟಿ ಬೆಳೆಸೋಣ, ಹೋರಾಟದ ಮೂಲಕ ನ್ಯಾಯಯುತ ಸವಲತ್ತುಗಳನ್ನು ಪಡೆಯಲು ಮುಂದಾಗೋಣ ಎಂದರು.


ಪುತ್ತೂರು ತಾಲೂಕು ಅಧ್ಯಕ್ಷರಾಗಿ ಭವಾನಿ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಾವತಿ ಡಿ.ಆರ್. ಕೋಶಾಽಕಾರಿಯಾಗಿ ತುಳಸಿ, ಸಲಹೆಗಾರರಾಗಿ ಪಿ.ಕೆ ಸತೀಶನ್, ಉಪಾಧ್ಯಕ್ಷರಾಗಿ ಸುಲೋಚನ, ಸಹಕಾರ್ಯದರ್ಶಿಯಾಗಿ ಸಾವಿತ್ರಿ ಆಯ್ಕೆಯಾದರು.

ಕಡಬ ತಾಲೂಕು ಅಧ್ಯಕ್ಷರಾಗಿ ಆಶಾ, ಪ್ರಧಾನ ಕಾರ್ಯದರ್ಶಿಯಾಗಿ ಶ್ಯಾಮಲ ರೈ, ಖಜಾಂಚಿಯಾಗಿ ಲೋಲಾಕ್ಷಿ, ಉಪಾಧ್ಯಕ್ಷರಾಗಿ ಭಾರತಿ, ಸಹಕಾರ್ಯದರ್ಶಿಯಾಗಿ ವೇದಾವತಿ, ಸಲಹೆಗಾರರಾಗಿ ಬಿ.ಎಂ.ಭಟ್ ಆಯ್ಕೆಯಾದರು. ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶವನ್ನು ಸೆ.೧೩ರಂದು ನಡೆಸುವ ಬಗ್ಗೆ ಘೋಷಣೆ ಮಾಡಲಾಯಿತು.

ಅಧ್ಯಕ್ಷತೆಯನ್ನು ಆಶಾ ಕಾರ್ಯಕರ್ತೆ ಭವಾನಿ ವಹಿಸಿದ್ದರು. ಸಿಐಟಿಯು ನಾಯಕಿ ಈಶ್ವರಿ ಶಂಕರ್ ಮುಂಡೂರು ಇದ್ದರು. ಸುಲೋಚನ ಸ್ವಾಗತಿಸಿದರು. ಆಶಾ ಕಾರ್ಯರ್ಕೆಯರ ಸಂಘ(ಸಿಐಟಿಯು) ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ದೇವಕಿ ಪ್ರಸ್ತಾವನೆಗೈದರು. ವೇದಾವತಿ ವಂದಿಸಿದರು. ರೇಖಾ ಕುದ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net