ಆಶಾ ಅಧ್ಯಕ್ಷೆ , ಹನುಮವ್ವ ಉಪಾಧ್ಯಕ್ಷೆ

Asha is the president and Hanumavva is the vice president
ಗುಳೇದಗುಡ್ಡ ತಾಲೂಕಿನ ಹಂಸನೂರು ಗ್ರಾಪಂ ಅಧ್ಯಕ್ಷರಾಗಿ ಆಶಾ ಚಿಂತಾಕಲ್ಲ, ಉಪಾಧ್ಯಕ್ಷರಾಗಿ ಹನುಮವ್ವ ದಾದಿ ಆಯ್ಕೆಯಾದರು.
Published on

ಗುಳೇದಗುಡ್ಡ: ತಾಲೂಕಿನ ಹಂಸನೂರು ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಶಾ ಸುಧಾ ಚಿಂತಾಕಲ್ಲ ಹಾಗೂ ಉಪಾಧ್ಯಕ್ಷರಾಗಿ ಹನುಮವ್ವ ರಂಗಪ್ಪ ದಾದಿ ಅವಿರೋಧವಾಗಿ ಆಯ್ಕೆಯಾದರು.

11 ಸದಸ್ಯರನ್ನು ಹೊಂದಿರುವ ಹಂಸನೂರು ಗ್ರಾಮ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿತ್ತು.

ಸೋಮವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರ ಆಯ್ಕೆಯನ್ನು ಅವಿರೋಧ ಎಂದು ಚುನಾವಣಾಧಿಕಾರಿ ಅಸ್ಲಂ ಮುಜಾವರ ಘೋಷಿಸಿದರು.

ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಗುಲಾಲು ಎರಚಿ ಸಂಭ್ರಮಿಸಿದರು. 11 ಜನ ಸದಸ್ಯರಲ್ಲಿ ಒಬ್ಬ ಸದಸ್ಯ ಗೈರಾಗಿದ್ದರು. ಸದಸ್ಯರಾದ ರಂಗಪ್ಪ ಕೆಸನೂರು, ಅಶೋಕ ಮರಾಠಿ, ತಿಪ್ಪವ್ವ ತಳವಾರ, ಕಸ್ತೂರಿ ಮುಗಜೋಳ, ಸಾಯಿಕುಮಾರ ಚಂದ್ರಗಿರಿ, ಮಾರುತಿ ಜಮೀನ್ದಾರ, ಬಸವರಾಜ ಕುರಬಣ್ಣವರ, ರೇಣುಕಾ ಮುತ್ತಲಗೇರಿ ಉಪಸ್ಥಿತರಿದ್ದರು.

ಪಿಡಿಒ ಮಂಜುನಾಥ ಅರಳಿಕಟ್ಟಿ, ಮಂಜುನಾಥ ಪತ್ತಾರ, ರಾಮಣ್ಣ ಮತ್ತಿಕಟ್ಟಿ, ರಜಾಕ್ ಚೋರಗತ್ತಿ, ಸಂತೋಷ ಬಡಿಗೇರ, ಹನುಮಂತ ಮತ್ತಿಕಟ್ಟಿ, ಮಂಜುನಾಥ ಮದಕಟ್ಟಿ, ಮಹಿಬೂಬ ಮುಜಾವರ, ಕನಕಪ್ಪ ತಳವಾರ, ಉಮೇಶ ಮಜ್ಜಗಿ, ರಫೀಕ ಚಿಕ್ಕೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net