ನರ್ಸಿಂಗ್​ ಪದವಿಯಲ್ಲಿ ಆಶಾಗೆ 2 ರ್ಯಾಂಕ್​

asha
Published on

ಮುಳಬಾಗಿಲು: ತಾಲೂಕಿನ ಮಾರಾಂಡಹಳ್ಳಿ ಡೇರಿ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಅವರ ಪುತ್ರಿ ಎಂ. ಎನ್​.ಆಶಾ ಬಿಎಸ್ಸಿ ನರ್ಸಿಂಗ್​ ಪದವಿಯಲ್ಲಿ ನ್ಯೂಟ್ರಿಷನ್​ ಮತ್ತು ಡೈಟಿಕ್ಸ್​ ವಿಷಯದಲ್ಲಿ 7ನೇ ರ್ಯಾಂಕ್​ ಹಾಗೂ ನರ್ಸಿಂಗ್​ ಫೌಂಡೇಷನ್​ ವಿಷಯದಲ್ಲಿ 9ನೇ ರ್ಯಾಂಕ್​ ಪಡೆದಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಎಂ.ಎನ್​.ಆಶಾಗೆ ಬೆಳ್ಳಿ ಪದಕ, ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಸರ್ಕಾರದ ವೈದ್ಯಕಿಯ ಶಿಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹ್ಮದ್​ ಮೋಹಸಿನ್​, ವೈದ್ಯಕಿಯ ಶಿಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಸುಜಾತ ರಾಥೋಡ್​, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಎಂ.ಡಿ.ಎನ್​.ಎಂ.ನಾಗರಾಜ್​, ಕರ್ನಾಟಕ ಶುಶ್ರೂಷ ಪರೀಾ ಪ್ರಾಧಿಕಾರ ಮಂಡಳಿಯ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ರಾಜೀವ್​ಗಾಂಧಿ ಆರೋಗ್ಯ ವಿಾನಗಳ ವಿಶ್ವವಿದ್ಯಾಲಯದ ಡೀನ್​ ಡಾ.ಪಿ.ಮಹೇಶ್​, ಬಿ.ಎಂ.ಸಿ.ಆರ್​.ಐ ನಿರ್ದೇಶಕ ಡಾ. ರಮೇಶ್​ ಕೃಷ್ಣ, ಪ್ರಾಂಶುಪಾಲ ಶ್ರೀಕಾಂತ್​ ಪುಲಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net