

ರಾಯಬಾಗ: ಮಹಾಮಾರಿ ಕರೊನಾ ನಿಯಂತ್ರಿಸಲು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕೆಎಂಎಫ್ ಅಧ್ಯಕ್ಷ ವಿವೇಕರಾವ ಪಾಟೀಲ ಹೇಳಿದರು.
ಪಟ್ಟಣದ ವಸಂತರಾವ್ ಪಾಟೀಲ ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಿ ಮಾತನಾಡಿದರು. ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಿಂದ 25 ಲಕ್ಷ ರೂ. ಪ್ರೋತ್ಸಾಹಧನ ವಿತರಿಸಲಾಗಿದೆ.
ಜಿಲ್ಲೆಯ ಪ್ರತಿ ಆಶಾ ಕಾರ್ಯಕರ್ತೆಗೆ 3 ಸಾವಿರ ರೂ. ಧನಸಹಾಯ ನೀಡಲಾಗುತ್ತಿದೆ. ಅಲ್ಲದೆ, ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿರುವುದಾಗಿ ತಿಳಿಸಿದರು. ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ, ಸಹಕಾರಿ ಸಂಘಗಳ ಉಪ ನಿರ್ದೇಶಕ ಕೆ.ಎಲ್. ಶ್ರೀನಿವಾಸ ಮಾತನಾಡಿದರು.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾಖಾನ್, ಡಾ. ವಿ.ಕೆ. ಜೋಷಿ, ಪಿಎಸ್‌ಐ ಗಜಾನನ ನಾಯಕ, ಡಾ. ಆರ್.ಎಚ್. ರಂಗನ್ನವರ, ಕೆಎಂಎಫ್ ನಿರ್ದೇಶಕರಾದ ಬಿ.ಬಿ. ಕಟ್ಟಿ, ಉದಯಸಿಂಹ ಶಿಂಧೆ, ಡಾ. ಬಿ.ಎಂ. ಪರವಣ್ಣವರ, ಬಿ.ಎಸ್. ವಾಗ್ಮೋಡೆ, ವಿ.ಬಿ. ಈಟಿ, ಆರ್.ಬಿ. ಡೂಗ, ಪಿ.ವೈ. ಅಂಬೋಜಿ, ಸುನೀತಾ ಖಾನಪ್ಪಗೋಳ, ಎಸ್.ಎಸ್. ಪಾಟೀಲ, ಆರ್.ಕೆ. ಬಂಡಿ ಹಾಗೂ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರು ಇದ್ದರು. ನಿರ್ದೇಶಕ ಎಸ್.ಎಸ್. ಮುಗಳಿ ನಿರ್ವಹಿಸಿದರು.