ಆಶಾ ಕಾರ್ಯಕರ್ತೆಯರ ಪ್ರತಿಭಟನೆ

18blrp1
Published on

ಬೇಲೂರು: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ತಾಲೂಕಿನ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಮುಖ್ಯಸ್ಥೆ ಪ್ರತಿಭಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸೋಂಕು ತಡೆಗಟ್ಟುವಲ್ಲಿ ಕಾರ್ಯಕರ್ತೆಯರು ಮಹತ್ತರ ಪಾತ್ರ ವಹಿಸಿದ್ದಾರೆ. ಜೀವದ ಹಂಗನ್ನು ತೊರೆದು ಕೆಲಸ ಮಾಡುವವರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಗದಿತ ಸಮಯಕ್ಕೆ ವೇತನವೂ ದೊರಕುತ್ತಿಲ್ಲ. ಇನ್ನೂ ಕೆಲವರಿಗೆ ಮೂರು ತಿಂಗಳಾದರೂ ವೇತನ ನೀಡಿಲ್ಲ. ಇನ್ನಾದರೂ ಸರ್ಕಾರ ವೇತನವನ್ನು ಪರಿಷ್ಕರಿಸಿ ಕನಿಷ್ಟ 12,000 ರೂ. ನಿಗದಿ ಮಾಡಬೇಕು ಎಂದರು.

ಬಳಿಕ ವೈದ್ಯಾಧಿಕಾರಿ ಡಾ.ಮಮತಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು. ಸಂಘದ ಪದಾಧಿಕಾರಿಗಳಾದ ಶಾರದಾ, ಜ್ಯೋತಿ, ರಾಧಿಕಾ, ಸೌಂದರ್ಯ, ಶಮೀಮ್, ದಿವ್ಯಾ, ಕವಿತಾ, ನೇತ್ರಾ, ಜಯಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net