ಎನ್‌ಟಿಪಿಸಿ ಬೂದಿ ತುಂಬುವ ವಾಹನಗಳ ನಿಲ್ದಾಣ ಉದ್ಘಾಟನೆ

Ash Filling Vehicle, Kolhara, Coogee NTPC, Bulker Vehicle,
ಕೊಲ್ಹಾರ ತಾಲೂಕಿನ ಕೂಡಗಿ ಎನ್‌ಟಿಪಿಸಿಯಲ್ಲಿ ಬೂದಿ ತುಂಬುವ ವಾಹನಗಳ ನಿಲ್ದಾಣವನ್ನು ಉದ್ಘಾಟಿಸಲಾಯಿತು.
Published on

ಕೊಲ್ಹಾರ: ತಾಲೂಕಿನ ಕೂಡಗಿ ಎನ್‌ಟಿಪಿಸಿಯಲ್ಲಿ ಸಿ.ಜಿ.ಎಂ. ಬಿದ್ಯಾನಂದ ಜಾ. ಅವರು ಬೂದಿ ತುಂಬುವ ವಾಹನಗಳ ನಿಲುಗಡೆ ಸ್ಥಳವನ್ನು ಸೋಮವಾರ ಉದ್ಘಾಟಿಸಿದರು.

ಬಿದ್ಯಾನಂದ ಜಾ ಮಾತನಾಡಿ, ಬೂದಿ ತುಂಬುವ 100 ಬಲ್ಕರ್ ವಾಹನಗಳು ನಿಲ್ಲುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬೂದಿ ತುಂಬಿಕೊಂಡು ಹೋಗುವ ಬಲ್ಕರ್ ವಾಹನಗಳು ರಸ್ತೆಯಲ್ಲಿ ನಿಲ್ಲುವ ಸಮಸ್ಯೆ ಇರುವುದಿಲ್ಲ ಎಂದರು.

ಕಿಶೋರಕುಮಾರ ಹೊತಾ, ಶ್ರೀನಿವಾಶ ಜಿಎಂ., ಕಲಿಯಾ ಮುರ್ತಿ ಹಾಗೂ ಎಚ್‌ಆರ್ ವಿಭಾಗ ಹಾಗೂ ಎನ್‌ಟಿಪಿಸಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net