ಬೂದಿವಾಳ ಕ್ಯಾಂಪ್ ಬಳಿ ಬಸ್ ನಿಲ್ಲಿಸಿ

21SND-01
ಸಿಂಧನೂರು ತಾಲೂಕಿನ ಬೂದಿವಾಳ ಕ್ಯಾಂಪ್ ಬಳಿ ವಿದ್ಯಾರ್ಥಿಗಳು ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
Published on

ಸಿಂಧನೂರು: ಬಸ್‌ಗಳ ನಿಲುಗಡೆಗೆ ಒತ್ತಾಯಿಸಿ ಬೂದಿವಾಳ ಕ್ಯಾಂಪ್ ಬಳಿ ವಿದ್ಯಾರ್ಥಿಗಳು ಮಂಗಳವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಬೂದಿವಾಳ ಕ್ಯಾಂಪ್ ಐದಾರು ಗ್ರಾಮಗಳಿಗೆ ಸಂಪರ್ಕ ಕೇಂದ್ರವಾಗಿದ್ದು, ಇಲ್ಲಿಂದಲೇ ಸಿಂಧನೂರಿನ ವಿವಿಧ ಕಾಲೇಜ್‌ಗಳಿಗೆ ನೂರಾರು ವಿದ್ಯಾರ್ಥಿಗಳು ತೆರಳುತ್ತಾರೆ. ಕಾಲೇಜ್ ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲ.

ರಾಯಚೂರು, ಸಿಂಧನೂರು, ಸಿರಗುಪ್ಪ, ಬಳ್ಳಾರಿ ಸಾರಿಗೆ ವಿಭಾಗದಿಂದ ನಿತ್ಯ 50 ಕ್ಕೂ ಹೆಚ್ಚು ಬಸ್‌ಗಳು ಕ್ಯಾಂಪ್ ಮಾರ್ಗವಾಗಿ ಸಂಚರಿಸಿದರೂ ಬೂದಿವಾಳ ಕ್ಯಾಂಪ್ ಬಳಿ ನಿಲ್ಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ 6 ರಿಂದ 7, ಮಧ್ಯಾಹ್ನ 1ರಿಂದ 3 ರವರೆಗೆ ಬಸ್ ಸೌಲಭ್ಯ ಕಲ್ಪಿಸಬೇಕು. ಕಳೆದ ಎರಡು ತಿಂಗಳಿಂದ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಈ ಸಮಸ್ಯೆ ಪರಿಹರಿಸಬೇಕೆಂದು ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net