ಆಶಾಡ ಏಕಾದಶಿ ಆಧ್ಯಾತ್ಮಿಕ ಸಂಪರ್ಕ ಕೊಂಡಿ

2
ಚಿಕ್ಕೋಡಿ ಸಿಎಲ್‌ಇ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಆಶಾಢ ಏಕಾದಶಿ ನಿಮಿತ್ತ ಹಮ್ಮಿಕೊಂಡಿದ್ದ ದಿಂಡಿ ಉತ್ಸವ ಸಮಾರಂಭದಲ್ಲಿ ವಿಠ್ಠಲ, ರುಕ್ಮಿಣಿ ಹಾಗೂ ಪಾಂಡುರಂಗನ ವೇಷಭೂಷಣ ಧರಿಸಿದ ಮಕ್ಕಳೊಂದಿಗೆ ಪ್ರಾಚಾರ್ಯೆ ಸ್ಮಿತಾ ಶಿಂಧೆ, ಎಸ್.ಎಸ್.ಮೆಟಗುಡ್ಡ, ಬಿ.ಡಿ.ರುಖಡೆ ಇತರರಿದ್ದರು.
Published on

ಚಿಕ್ಕೋಡಿ: ಆಶಾಡ ಏಕಾದಶಿ ನಮ್ಮ ಸಾಂಸ್ಕೃತಿ, ಪರಂಪರೆ ಮತ್ತು ಆಧ್ಯಾತ್ಮಿಕ ಸಂಪರ್ಕದ ಕೊಂಡಿಯಾಗಿದೆ ಎಂದು ಸಿಎಲ್‌ಇ ಸಿಬಿಎಸ್‌ಇ ಪ್ರಾಚಾರ್ಯೆ ಸ್ಮಿತಾ ಶಿಂಧೆ ಹೇಳಿದರು.

ಪಟ್ಟಣದ ಸಿಎಲ್‌ಇ ಸಂಸ್ಥೆಯ ಸಿಬಿಎಸ್‌ಇ ಶಾಲೆಯಲ್ಲಿ ಆಶಾಡ ಏಕಾದಶಿ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ದಿಂಡಿ ಉತ್ಸವ ಸಮಾರಂಭದಲ್ಲಿ ಮಾತನಾಡಿದರು. ಶಾಲೆಯ 160ಕ್ಕೂ ಹೆಚ್ಚು ಮಕ್ಕಳು ವಿಠ್ಠಲ, ರುಕ್ಮಿಣಿ ಹಾಗೂ ಪಾಂಡುರಂಗನ ವೇಷಭೂಷಣ ಧರಿಸಿ ಮಿಂಚಿದರು.

ಸಿಎಲ್‌ಇ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಎಸ್.ಎಸ್.ಮೆಟಗುಡ್ಡ, ಬಿ.ಡಿ.ರುಖಡೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಡಿ.ಎಸ್.ಕೋಳಿ ಇತರರಿದ್ದರು. ಎ.ಎನ್.ಮಡಿವಾಳ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net