ಬರೆದಂತೆ ನಡೆಯುವುದು ಕಷ್ಟ

web1
ಗೋಕಾಕ ನಗರದಲ್ಲಿ ಗೋಕಾವಿ ಬುತ್ತಿ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು. ಡಾ.ಜಿ.ಬಿ.ನಂದನ, ಮಹಾಂತೇಶ ತಾವಂಶಿ, ಪ್ರೊ.ಚಂದ್ರಶೇಖರ ಅಕ್ಕಿ, ವಿದ್ಯಾ ರೆಡ್ಡಿ ಇತರರಿದ್ದರು.
Published on

ಗೋಕಾಕ: ಸಾಹಿತ್ಯ ಲೋಕಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರ. ಅವರ ಚಿಂತನೆ ಉಳಿಸುವ ಕಾರ್ಯವನ್ನು ಸಾಹಿತಿಗಳು ಮಾಡಬೇಕಿದೆ ಎಂದು ಧಾರವಾಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಜಿ.ಬಿ.ನಂದನ ಹೇಳಿದರು.

ನಗರದ ರಾಮಲಿಂಗೇಶ್ವರ ಸಭಾಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಗೋಕಾಕ ಹಾಗೂ ಗೋಕಾವಿ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಜಯಾನಂದ ಮಾದರ ರಚನೆಯ ಗೋಕಾವಿ ಬುತ್ತಿ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ಸಾಹಿತ್ಯ ಬರೆಯುವುದು ಸುಲಭ. ಆದರೆ, ಬರೆದಂತೆ ನಡೆಯುವುದು ತುಂಬ ಕಷ್ಟ. ಯಾಂತ್ರಿಕ ಬದುಕಿನಲ್ಲಿ ನಾವು ಹೃದಯ ವೈಶಾಲ್ಯ ಕಳೆದುಕೊಂಡಿದ್ದೇವೆ. ಅದನ್ನು ಮರಳಿ ಪಡೆಯುವ ಕೆಲಸವಾಗಬೇಕಿದೆ ಎಂದರು.

ಮಹಾಂತೇಶ ತಾವಂಶಿ ಉದ್ಘಾಟಿಸಿದರು. ವಿಶ್ರಾಂತ ಪ್ರೊ.ಚಂದ್ರಶೇಖರ ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಡಾ.ಲಕ್ಷ್ಮಣ ಚೌರಿ, ರಜನಿ ಜಿರಗ್ಯಾಳ, ಬಸವರಾಜ ಮುರಗೋಡ, ಪ್ರೊ.ಸಂಗಮೇಶ ಗುಜಗೊಂಡ, ಬಿ.ವಿ. ಹಿರೇಮಠ, ಡಾ.ಅರುಣ ಸವತಿಕಾಯಿ, ಈಶ್ವರಚಂದ್ರ ಬೆಟಗೇರಿ, ಜಯಾನಂದ ಮಾದರ, ವಿದ್ಯಾ ರೆಡ್ಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net