ನಿಗದಿಯಂತೆ ಕಬ್ಬಿನ ಹಣ ಪಾವತಿಸಲಿ

6 HDLP 03
ಹೂವಿನಹಡಗಲಿ ತಾಲೂಕಿನ ಬೀರಬ್ಬಿಯ ಮೈಲಾರ ಸಕ್ಕರೆ ಕಾರ್ಖಾನೆಯನ್ನು ಬಂದ್ ಮಾಡಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ಕಬ್ಬು ಬೆಳೆಗಾರರಾದ ಕೊಡಬಾಳ ಹನುಮಂತಪ್ಪ, ಹೌಸಿ ನಾಗಪ್ಪ, ಕೊಡಬಾಳ ಬಸಜ್ಜ, ಗಡ್ಡಿಗೌಡ್ರ ಸಿದ್ದಪ್ಪ, ವಿಜಯಕುಮಾರ್, ಸಂಗಜ್ಜ, ವೀರಣ್ಣ, ನಿಂಗಪ್ಪ, ಹೊನ್ನಪ್ಪ, ಪರಮೇಶಪ್ಪ ಹಾಗೂ ಇತರರಿದ್ದರು.
Published on

ಹೂವಿನಹಡಗಲಿ: ಕಬ್ಬು ಕಟಾವು ಮಾಡಿದ 15 ದಿನದೊಳಗಾಗಿ ಜಮಾ ಮಾಡಬೇಕಿದ್ದ ಹಣವನ್ನು ಪಾವತಿಸುವಂತೆ ಒತ್ತಾಯಿಸಿ ತಾಲೂಕಿನ ಬೀರಬ್ಬಿಯ ಮೈಲಾರ ಸಕ್ಕರೆ ಕಾರ್ಖಾನೆ ಮುಂದೆ ಬುಧವಾರ ಬೆಳೆಗಾರರು ಪ್ರತಿಭಟನೆ ನಡೆಸಿದರು.

ರೈತ ಕೊಡಬಾಳ ಹನುಮಂತಪ್ಪ ಮಾತನಾಡಿ, ವಿಜಯನಗರ ಹಾಗೂ ಹಾವೇರಿ ಜಿಲ್ಲೆಗಳ ಜಮೀನುಗಳಲ್ಲಿನ ಕಬ್ಬು ಫಸಲನ್ನು ಕಟಾವು ಮಾಡಿದ 15 ದಿನದೊಳಗಾಗಿ ಹಣ ಪಾವತಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದೇವೆ. ರೈತರ ತಲಾ 2 ರಿಂದ 8 ಲಕ್ಷ ರೂ.ವರೆಗೆ ಪಾವತಿ ಬಾಕಿ ಇದೆ. ನಮ್ಮ ಹಣ ನೀಡುವವರೆಗೂ ನಾವು ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ ಎಂದು ಹೇಳಿದರು.

ಕಾರ್ಖಾನೆ ಮತ್ತು ಅಧಿಕಾರಿಗಳ ಸಭೆಯಲ್ಲಿ ರೈತರಿಗೆ ಹಣ ವಿತರಿಸುವಂತೆ ಸೂಚನೆ ನೀಡಿದ್ದರೂ ಕಾರ್ಖಾನೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಇದರಿಂದ ನಾವು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದೇವೆ.

ನಮ್ಮ ಜಮೀನುಗಳಲ್ಲಿ ಉಳುಮೆ ಮಾಡಲು ಹಣ ಇಲ್ಲ. ನಾವು ಬೇರೆ ಕಡೆ ಬಡ್ಡಿಗೆ ಹಣ ತಂದು ಕೃಷಿ ಮಾಡಿದ್ದೇವೆ. ಆದರೆ, ಕಾರ್ಖಾನೆಯವರು ನಮ್ಮ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net