ಸಿಂಧನೂರು: ಕರ್ನಾಟಕ ಮುಸ್ಲಿಂ ಸಂಘ (ಮುಸ್ಲಿಂ ಪರ ಸಂಘಟನೆಗಳ ಒಕ್ಕೂಟ)ದ ತಾಲೂಕು ಘಟಕದ ಅಧ್ಯಕ್ಷರಾಗಿ ಮಹಮ್ಮದ್ ಫಯಾಜ್ ಅಹ್ಮದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಎಲ್.ಎಸ್.ಬಶೀರ್ ಅಹ್ಮದ್ ತಿಳಿಸಿದರು.
ನಗರದ ಸರ್ಕಿಟ್‌ಹೌಸ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸೋಮವಾರ ಮಾತನಾಡಿ, ಮುಸ್ಲಿಂ ಸಮಾಜದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು, ನಾಡು-ನುಡಿ, ನೆಲ-ಜಲ, ಗಡಿ ಹೋರಾಟಗಳಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು. ಹಿರಿಯ ಮುಖಂಡರಾದ ಸೈಯ್ಯದ್ ಬಾಬರ್ ಪಾಷಾ ಜಾಗೀರ್‌ದಾರ್ ವಕೀಲ, ಜಿಲಾನಿ ಪಾಷಾ ಖಾಜಿ, ಸೈಯ್ಯದ್ ಹಾರೂನ್ ಸಾಬ್ ಜಾಗೀರ್‌ದಾರ್, ಅಬ್ದುಲ್ ಖದೀರ್, ಸಲೀಂ ಕೋಟೆ, ಬಾಬಾ ಚುಕ್ಕಿ, ನಿಸಾರ್‌ಖಾನ್, ವಲಿ, ಸೋಹೆಲ್ ದೇಸಾಯಿ, ಅಮರೇಶ ಬಾಗೋಡಿ, ಪ್ರಶಾಂತಿ ಪಚ್ಚಿ, ರಜಿಯಾಬೇಗಂ ಇತರರಿದ್ದರು.