ಅಧ್ಯಕ್ಷರಾಗಿ ಬಿ.ರಸೂಲ್ ಆಯ್ಕೆ

Published on

ಕಂಪ್ಲಿ: ಇಲ್ಲಿನ ಜೆಸಿಐ ಕಂಪ್ಲಿ ಸೋನಾ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ಸಭೆ ಮಂಗಳವಾರ ಅತಿಥಿಗೃಹ ಆವರಣದಲ್ಲಿ ನಡೆಯಿತು. ಬಿ.ರಸೂಲ್(ಅಧ್ಯಕ್ಷ), ಡಾ.ಭರತ ಪದ್ಮಶಾಲಿ(ಉಪಾಧ್ಯಕ್ಷ), ಎಸ್.ಕೆ.ಇಮ್ತಿಯಾಜ್(ಕಾರ್ಯದರ್ಶಿ) ಅವಿರೋಧ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ವಲಯ 24ರ ಉಪಾಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ ತಿಳಿಸಿದರು.

ನೂತನ ಅಧ್ಯಕ್ಷ ಬಿ.ರಸೂಲ್ ಮಾತನಾಡಿ, ಯುವಜನತೆಯಲ್ಲಿ ವ್ಯಕ್ತಿತ್ವ ವಿಕಸನದೊಂದಿಗೆ ನಾನಾ ಕ್ಷೇತ್ರಗಳಲ್ಲಿ ಮುನ್ನುಗ್ಗಿ ಸಾಧಿಸುವ ಕೌಶಲ ಪ್ರೇರಣೆಗೊಳಿಸುವ, ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಜೆಸಿಐ ಕಂಪ್ಲಿ ಸೋನಾದ ಪೂರ್ವ ಅಧ್ಯಕ್ಷರಾದ ಸುಹಾಸ ಚಿತ್ರಗಾರ, ಪ್ರಸಾದ ಗಡಾದ್, ರಾಕೇಶ ಬಾಗ್ರೇಚಾ, ವಾಸಿಮ್ ಫಯಾಜ್, ಬಡಿಗೇರ ಜಿಲಾನ್‌ಸಾಬ್, ಡಿ.ಮಂಜೇಶ, ಪ್ರಮುಖರಾದ ಬಿ.ಎಚ್.ಎಂ.ಅಮರನಾಥಶಾಸ್ತ್ರಿ, ಎಸ್.ಎಂ.ಗುರುಪ್ರಸನ್ನ, ಅಕ್ಕಿ ಜಿಲಾನ್, ಡಿ.ಇಸ್ಮಾಯಿಲ್, ರಾಜಾ, ಇಸಾಕ್, ರಿಯಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net