ಭಾನುವಾರ ಜಸ್ಟೀಸ್ ಹೊಂಬೇಗೌಡ ಸೇವಾ ಸಮಿತಿ ಸುವರ್ಣ ಮಹೋತ್ಸವ

Published on

ಬೆಂಗಳೂರು: ಜಸ್ಟೀಸ್ ಹೊಂಬೇಗೌಡ ಸೇವಾ ಸಮಿತಿಯ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿವಿ ಪುರಂನ ಕುವೆಂಪು ಕಲಾಕ್ಷೇತ್ರದಲ್ಲಿ ಸಂಜೆ 4ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಶಾಸಕರಾದ ಎಂ.ಕೃಷ್ಣಪ್ಪ, ಕೆ.ಗೋಪಾಲಯ್ಯ, ಎ.ಮಂಜು, ಸಿ.ಎನ್.ಬಾಲಕೃಷ್ಣ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಮಾರಂಭದಲ್ಲಿ ನ್ಯಾಯಾಂಗ ಕ್ಷೇತ್ರದ ಸಾಧಕರಾದ ಜಸ್ಟೀಸ್ ಗೌಪಾಲಗೌಡ, ಜಸ್ಟೀಸ್ ಎ.ಜೆ.ಸದಾಶಿವ, ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್, ಜಸ್ಟೀಸ್ ಹುಲವಾಡಿ ಜಿ.ರಮೇಶ್ ಮತ್ತಿತರರಿಗೆ ಜಸ್ಟೀಸ್ ಹೊಂಬೇಗೌಡ ಪ್ರಶಸ್ತಿ ಹಾಗೂ ಪ್ರತಿಭಾನ್ವಿತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net