

ಹಾನಗಲ್ಲ: ವಾರದ ಬಡ್ಡಿಯಂತೆ ಸಾಲ ಕೊಟ್ಟು ಇಬ್ಬರು ಆರೋಪಿತರ ವಿರುದ್ಧ ಇಲ್ಲಿಯ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ಬೊಮ್ಮನಹಳ್ಳಿಯ ಭಾಗ್ಯ ರಮೇಶ ಗುಡಿಗಾರ ಹಾಗೂ ರಮೇಶ ಗಣಪತೆಪ್ಪ ಗುಡಿಗಾರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಖ್ವಾಜಾಮೈನುದ್ದಿನ ಶಿಗ್ಗಾಂವಿ ಎಂಬುವರು ಇವರ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿತರು ಒಂದೂವರೆ ವರ್ಷದ ಹಿಂದೆ ವಾರಕ್ಕೆ 20 ಸಾವಿರ ರೂ.ನಂತೆ ಬಡ್ಡಿ 3 ಲಕ್ಷ ರೂ. ಸಾಲ ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ 7 ಚೆಕ್ಗಳನ್ನು ಪಡೆದುಕೊಂಡಿದ್ದರು. ಈವರೆಗೂ ಅವರಿಗೆ 30 ಲಕ್ಷ ರೂ. ಹಣ ಕೊಟ್ಟಿದ್ದೇನೆ. ಆದರೆ, ಬಾಕಿಯಿರುವ 15 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ನಿಮ್ಮ ಮೇಲೆ ಚೆಕ್ ಬೌನ್ಸ್ ಹಾಗೂ ರೇಪ್ ಕೇಸ್ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.