

ಬೆಳಗಾವಿ: ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಅಧ್ಯಕ್ಷರನ್ನಾಗಿ ಸಾಹಿತಿ ಡಾ. ಸರಜೂ ಕಾಟ್ಕರ್ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಾ.ಸರಜೂ ಕಾಟ್ಕರ್ ಕವಿ, ಲೇಖಕ ಹಾಗೂ ಕಾದಂಬರಿಕಾರರಾಗಿ ಈಗಾಗಲೇ 80ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ, ಕನ್ನಡ ಸಾಹಿತ್ಯ ಸಂಯೋಜಕರಾಗಿಯೂ ಕೆಲಸ ಮಾಡಿದ್ದಾರೆ.
ಡಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಸದಸ್ಯರಾಗಿ ಡಾ.ವೈ.ಎಂ.ಯಾಕೊಳ್ಳಿ, ಡಾ.ಅಶೋಕ ಶೆಟ್ಟರ್, ಶ್ರೀಲಾಧರ ಮುಗಳಿ, ಡಾ.ಶರಣಮ್ಮ ಗೋರಬಾಳ, ಪ್ರಭು ಕುಂದರಗಿ, ಪುನರ್ವಸು ಪಾಂಡುರಂಗ ಬೇಂದ್ರೆ, ಇಮಾಮಸಾಬ್ ವಲ್ಲೇಪ್ಪನ್ನವರ ನೇಮಕಗೊಂಡಿದ್ದಾರೆ.