

ರಾಯಚೂರು: ಎಐಸಿಸಿ ಅಧ್ಯಕ್ಷ ಸ್ಥಾನ ದೇಶದಲ್ಲಿ ಪ್ರಮುಖ ಸ್ಥಾನವಲ್ಲ. ಅದು ಪಕ್ಷದ ಕಚೇರಿ ನಿರ್ವಹಣೆಗೆ ಹಾಗೂ ಕಸಗುಡಿಸುವುದಕ್ಕೆ ನಿಯುಕ್ತಿಗೊಳಿಸಿದಂತೆ. ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷ ಸ್ಥಾನ ನೀಡಿರುವುದು ಯಾವುದೇ ಘನತೆಗಾಗಿ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗಾಗಿ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಕಾಂಗ್ರೆಸ್‌ಗೆ ದಲಿತರಿಗೆ ಸ್ಥಾನಮಾನ ನೀಡುವ ಉದ್ದೇಶ ಇದ್ದರೇ ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಿತ್ತು. ದಲಿತರನ್ನು ಪ್ರಧಾನಿ ಮಾಡುತ್ತೇವೆ ಎನ್ನುವುದು ಚುನಾವಣೆ ಗಿಮಿಕ್ ಎಂದರು.
ಕಾಂಗ್ರೆಸ್‌ನವರಿಗೆ ಪಕ್ಷವನ್ನು ಸದೃಢಗೊಳಿಸಲು ದಲಿತರು ಬೇಕು. ಅಕಾರ ನೀಡಲು ಬೇಡ. ಖರ್ಗೆ, ಪರಮೇಶ್ವರ ಹಾಗೂ ಕೆ.ಎಚ್.ಮುನಿಯಪ್ಪರನ್ನು ಸಿಎಂ ಮಾಡಿದ್ರಾ. ಈಗ ಖರ್ಗೆಯನ್ನು ಪ್ರಧಾನಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ಕೆಟ್ಟ ಭಾಷೆ ಬಳಸುತ್ತಿರಲಿಲ್ಲ. ರಾಹುಲ್‌ಗಾಂ ಸಹವಾಸ ದೋಷದಿಂದ ಕೆಟ್ಟ ಬಳಸುವ ಪ್ರವೃತ್ತಿಗೆ ಗುರಿಯಾಗಿದ್ದಾರೆ. ಪ್ರಧಾನಿ ಮೋದಿ ಸುಳ್ಳುಗಾರ ಎಂದು ಖರ್ಗೆ ಹೇಳಿಕೆಗೆ ಜನರು ಚುನಾವಣೆಯಲ್ಲಿ ಉತ್ತಮ ನೀಡಲಿದ್ದಾರೆ.
ಮಂಡ್ಯದಲ್ಲಿ ಚಿತ್ರನಟರು ಕಾಂಗ್ರೆಸ್ ಪರ ಪ್ರಚಾರಕ್ಕೆ ತೆರಳಿದರೂ ಮೈತ್ರಿ ಅಭ್ಯರ್ಥಿ ಮೇಲೆ ಪರಿಣಾಮ ಬೀರುವುದಿಲ್ಲ. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲ್ಲುತ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.