

ಮೂಡಲಗಿ: ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳು ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಇಲಾಖೆ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳು ಆಯ್ಕೆಯಾಗಿದ್ದು, ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ. ಮೇಲಧಿಕಾರಿಗಳ ಸೂಚನೆ ಪಾಲಿಸುವ ಜತೆಗೆ ನೌಕರರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಅಂದಾಗ ನೌಕರರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ವಿವಿಧ ತಾಲೂಕುಗಳಂತೆ ನಮ್ಮ ಕ್ಷೇತ್ರದಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ ನಡೆಯಲಿದೆ. 24 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಒಗ್ಗಟ್ಟಿನ ಸಂದೇಶ ಸಾರಿದೆ. ಮೂಡಲಗಿ ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯ ಮಾದರಿಯಾಗಿದೆ. ಸಂಘದ ಅಬಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸರ್ಕಾರಿ ನೌಕರರ ಸಂಘದ ಸದಸ್ಯರಾಗಿ ಉಮರಾಣಿ, ಗೋಪಾಲ ಮುತ್ತೆಪ್ಪಗೋಳ, ಅಕ್ಷಯ ಅವಾಡೆ, ಸದಾಶಿವ ಸವದತ್ತಿ, ವಿ.ಎ.ಹುಲ್ಲಾರ, ಶಿವನಗೌಡ ಪಾಟೀಲ, ಶಿವಬಸಪ್ಪ ಕುಂಬಾರ, ಸಿದ್ಧಾರೂಢ ನಾಗನೂರ, ರಮೇಶ ಬುದ್ನಿ, ಎಸ್.ಕೆ.ಚಿಪ್ಪಲಕಟ್ಟಿ, ಚೇತನ ಕುರಿಹುಲಿ, ಅಪ್ಪಯ್ಯ ಹುಣಶ್ಯಾಳ, ಶಾಂತವ್ವ ಮರೆನ್ನವರ, ಮಹಾಂತೇಶ ಹಿಪ್ಪರಗಿ, ಆನಂದ ಹಂಜ್ಯಾಗೋಳ, ಸಂಜೀವ ಕೌಜಲಗಿ, ಶಿವಲಿಂಗಪ್ಪ ಪಾಟೀಲ, ರಾಮಚಂದ್ರ ಸಣ್ಣಕ್ಕಿ, ಸಿದ್ದಣ್ಣ ಕರೋಳಿ, ವಾಸುದೇವ ಹೂವಣ್ಣವರ, ವೆಂಕಟೇಶ ಕೊಪ್ಪದ, ಸದಾಶಿವ ದೇವರ, ಚೇತನ ಬಳಿಗಾರ, ಕಸ್ತೂರಿ ಪಡೆನ್ನವರ ಅವಿರೋಧವಾಗಿ ಆಯ್ಕೆಯಾದರು. ಎಲ್ಲ 24 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಶಿವಾನಂದ ಗುಡಸಿ ೋಷಿಸಿದರು.