ಶನಿವಾರ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ; ಅಭಂಗಗಳ ಭಾವಪೂರ್ಣ ಸಂಜೆ

panchama
Published on

ಬೆಂಗಳೂರು: ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರೋತ್ಸಾಹಿಸುವುದಕ್ಕೆ ಮೀಸಲಾಗಿರುವ ಪಂಚಮ ನಿಷಾದ ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಆಷಾಡ ಏಕಾದಶಿ ವಿಶೇಷ ಬೋಲಾವ ವಿಠಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಭಾವಪೂರ್ಣವಾದ ಅಭಂಗಗಳ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕರಾದ ಜಯತೀರ್ಥ ಮೇವುಂಡಿ ಮತ್ತು ದೇವಕಿ ಪಂಡಿತ್ ಅಭಂಗಗಳನ್ನು ಪ್ರಸ್ತುತಪಡಿಸಲಿದ್ದಾರೆ. ಇವರೊಂದಿಗೆ ತಬಲಾದಲ್ಲಿ ನಿಖಿಲ್ ಪಾಠಕ್, ಪಖವಾಜ್‌ನಲ್ಲಿ ಸುಖದ್ ಮುಂಡೆ, ಇತರ ವಾದ್ಯಗಳಲ್ಲಿ ಸೂರ್ಯಕಾಂತ್ ಸುರ್ವೆ, ಹಾರ್ಮೋನಿಯಂನಲ್ಲಿ ಆದಿತ್ಯ ಓಕೆ ಮತ್ತು ಕೊಳಲು ವಾದನದಲ್ಲಿ ಷಡ್ಜ್ ಗೋಡ್ಖಿಂಡಿ ಸಾಥ್ ನೀಡಲಿದ್ದಾರೆ.

ಬೋಲಾವ ವಿಠಲ ಕಾರ್ಯಕ್ರಮ ಭಕ್ತಿಯಲ್ಲಿ ಮುಳುಗೇಳುವ ಒಂದು ಪಯಣವಾಗಿದ್ದು, ಸಂಗೀತದಲ್ಲಿರುವ ಶಕ್ತಿಯ ಮೂಲಕ ಭಕ್ತಿಯನ್ನು ಪ್ರೇಕ್ಷಕರಿಗೆ ತಲುಪಿಸಲು ಈ ಕಾರ್ಯಕ್ರಮವನ್ನು ಆಯೋಜಿಸುರುವುದಾಗಿ ಪಂಚಮ ನಿಷಾದ ಸಂಸ್ಥೆಯ ಸಂಸ್ಥಾಪಕ ಶಶಿವ್ಯಾಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net