

ಚಿಕ್ಕೋಡಿ: ಹುಬ್ಬಳ್ಳಿ ಕೆಒಎಫ್ ನಿರ್ದೇಶಕರಾಗಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿ., ಹುಬ್ಬಳ್ಳಿ ನಿರ್ದೇಶಕ ಮಂಡಳಿ ಚುನಾವಣೆ ಪ್ರಕ್ತಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯಿಂದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿಯ ಪ್ರಭಾಕರ ಡಬ್ಬನ್ನವರ, ದೀಪಕ ಪಾಟೀಲ, ಬಾಗಲಕೋಟೆ ಜಿಲ್ಲೆಯಿಂದ ಬಿ.ಟಿ.ಬೆನಕಟ್ಟಿ, ಹನುಮಂತಗೌಡ ಪಾಟೀಲ,ವಿಜಯಪುರ ಜಿಲ್ಲೆಯಿಂದ ದಯಾನಂದ ಅಲಗೌಂಡ, ಹಾವೇರಿಯಿಂದ ಜಗದೀಶ ತಂಬಾಕದ, ಧಾರವಾಡ ಜಿಲ್ಲೆಯಿಂದ ಮಲ್ಲಿಕಾರ್ಜುನ ಅಕ್ಕಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿ ತಹಸೀಲ್ದಾರ್ ಪ್ರಕಾಶ ನಾಶಿ ಅವರು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.