

ಚಿಕ್ಕಮಗಳೂರು: ಬೌದ್ಧ ಧರ್ಮ ಸ್ವೀಕರಿಸುವವರು ಬೇರೆ ಧರ್ಮವನ್ನು ವಿರೋಧಿಸುವ, ನಿಂದಿಸುವ ಮೂಲಕ ಸಂಘರ್ಷಕ್ಕೆ ಇಳಿಯಬಾರದು. ಬದಲಿಗೆ ರಚನಾತ್ಮಕವಾಗಿ ಪರಿವರ್ತನೆಯಾಗಬೇಕು ಎಂದು ಸಾಮಾಜಿಕ ಚಿಂತಕ ಹಾಗೂ ಬೆಂಗಳೂರಿನ ಐಎಎಸ್ ಅಕ್ಕ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ್ ತಿಳಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಅಖಿಲ ಭಾರತ ಬುದ್ಧ ಮಹಾಸಭಾ ಜಿಲ್ಲಾ ಶಾಖೆ ಏರ್ಪಡಿಸಿದ್ದ ಧರ್ಮೋಪದೇಶ ಮತ್ತು ಧರ್ಮ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕಾರ ಮತ್ತು ನೈತಿಕತೆ ಧರ್ಮದಿಂದ ಬರುತ್ತದೆ. ನೈತಿಕ ಬಲದಿಂದ ರಚನಾತ್ಮಕ ಕಾರ್ಯದಲ್ಲಿ ತೊಡಗಬೇಕು. ಇನ್ನೊಂದು ಧರ್ಮವನ್ನು ನಿಂದಿಸುವುದು, ವಿರೋಧಿಸುವುದರಿಂದ ಏನು ಸಾಧ್ಯವಾಗುವುದಿಲ್ಲ. ಋಣಾತ್ಮಕ ಚಿಂತನೆ ಮೂಲಕ ಹಿಂದು ಧರ್ಮಪಾಲಕರೊಂದಿಗೆ ಸಂಘರ್ಷಕ್ಕೆ ಇಳಿಯಬಾರದು ಎಂದರು.
ಕ್ರಿ.ಪೂ.1885ರ ಪೂರ್ವದಲ್ಲಿ ಹಿಂದು ಕಾನೂನು ಗ್ರಂಥವಾಗಿದ್ದ ಮನುಸ್ಮತಿಯನ್ನು ಜಾರಿಗೆ ತಂದು ವರ್ಣಾಶ್ರಮ ಪದ್ಧತಿ ಆಚರಣೆಗೆ ತರಲಾಗಿತ್ತು. ಇದರಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಹೊರತಾದ ವಿವಿಧ ಕಸುಬುಗಳನ್ನು ಅವಲಂಬಿಸಿದ್ದ ಜನರನ್ನು ಶೂದ್ರರೆೆಂದು ಪರಿಗಣಿಸಿ ಮೇಲ್ವರ್ಗದ ಎಲ್ಲ ಜನರ ಸೇವೆ ಮಾಡುವ ಭಯಾನಕ ನಿಬರ್ಂಧ ಹೇರಲಾಗಿತ್ತು. ಈ ನಿಬರ್ಂಧಗಳನ್ನು ವಿರೋಧಿಸಿ ಹೊರಗಿದ್ದವರನ್ನು ಅಸ್ಪಶ್ಯರೆಂದು ದೂರವಿಡಲಾಗಿತ್ತು. ಈ ರೀತಿಯ ದೂರ ಉಳಿದ ಅಸ್ಪಶ್ಯರೆಲ್ಲಾ ಬುದ್ಧನ ಅನುಯಾಯಿಗಳೆಂದು ಚರಿತ್ರೆಯಲ್ಲಿ ಅಧ್ಯಯನ ಮಾಡಿದ ಅಂಬೇಡ್ಕರ್ ತಾವೂ ಬೌದ್ಧ ಧರ್ಮ ಸ್ವೀಕರಿಸುವ ದಿಟ್ಟ ನಿರ್ಧಾರ ಮಾಡಿದರು ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಧರ್ಮ ದೀಕ್ಷೆ ಕಾರ್ಯಕ್ರಮ ಜಿಲ್ಲೆಯಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ೀಕ್ಷೆ ಪಡೆದವರು ಬುದ್ಧನ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಬರೆದ ಸಂವಿಧಾನದ ಕಾರಣದಿಂದಾಗಿ ಇಂದು ನಾನು ಶಾಸಕನಾಗಿದ್ದೇನೆ ಎಂದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಅ.14 ಭಾರತದ ಚರಿತ್ರೆಯಲ್ಲಿ ಮಹತ್ವದ ದಿನ. ಸಮಾಜದಲ್ಲಿ ಜಾತಿ, ತಾರತಮ್ಯದಿಂದ ಶೋಷಿತ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮಿಂದಲೇ ಬದಲಾವಣೆ ಆಗಬೇಕೆಂಬ ದೂರ ಸಂಕಲ್ಪದೊಂದಿಗೆ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರ್ಪಡೆಯಾದ ಪವಿತ್ರವಾದ ದಿನ ಎಂದರು.