ಬಾಲ್ಯದಲ್ಲಿಯೇ ಗ್ರಾಮೀಣ ಕಲೆ ಕಲಿಸಿ

kampli Drama
ಕಂಪ್ಲಿ ತಾಲೂಕಿನ ಗೋನಾಳ್‌ದಲ್ಲಿ ಏರ್ಪಡಿಸಿದ್ದ ಶ್ರೀಕೃಷ್ಣ ಸಂಧಾನ ನಾಟಕದ ಪ್ರಸಂಗ ದೃಶ್ಯ. ಕಲಾವಿದರಾದ ಜಿ.ಎಂ.ವಿಜಯಕುಮಾರ್, ನಾಗವೇಣಿ, ರಮೇಶ, ಶಶಿಕುಮಾರ್, ರಾಜೇಶ್ ವಿವಿಧ ಪಾತ್ರ ನಿಭಾಯಿಸಿದರು.
Published on

ಕಂಪ್ಲಿ: ಟಿವಿ, ಮೊಬೈಲ್ ಹಾವಳಿಯಿಂದಾಗಿ ಗ್ರಾಮೀಣ ಕಲೆಗಳು ನಶಿಸಿ ಹೋಗುತ್ತಿದ್ದು, ಜತನ ಮಾಡುವಲ್ಲಿ ಸಂಘಟನೆಗಳು ಮುಂದಾಗಬೇಕಿದೆ ಎಂದು ವಿಎಸ್‌ಕೆ ವಿವಿ ಸಿಂಡಿಕೇಟ್ ಸದಸ್ಯ ಕೆ.ಶಿವಕುಮಾರ್ ಹೇಳಿದರು.

ಗೋನಾಳ್ ಗ್ರಾಮದಲ್ಲಿ ಮಾವಿನಹಳ್ಳಿಯ ಶ್ರೀಸಿದ್ಧೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮೀಣ ಸಂಜೆ ಸಾಂಸ್ಕೃತಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಕ್ಕಳಲ್ಲಿ ಬಾಲ್ಯದಲ್ಲಿಯೇ ಶಿಕ್ಷಣದೊಂದಿಗೆ ಗ್ರಾಮೀಣ ಕಲೆಗಳ ಕಲಿಸಬೇಕಿದೆ ಎಂದರು.

ರಂಗಭೂಮಿ ಕಲಾವಿದ ಕೆ.ಶಂಕರ್ ಮೆಟ್ರಿ ಮಾತನಾಡಿದರು. ಗೊರವರ ಜಗದೀಶ, ಗೊರವರ ಹನುಮೇಶ ಅವರು ಗೊರವರ ಪದಗಳನ್ನು ಹಾಡಿದರು. ಅಮರೇಶ ತಂಡದಿಂದ ಅಭಿಮನ್ಯು ಕಾಳಗ, ಕೆ.ಶಂಕರ್ ತಂಡದಿಂದ ಕಂಸಾಳೆ ಸಮೂಹ ನೃತ್ಯ, ಜಿ.ಎಂ.ವಿಜಯಕುಮಾರ್ ತಂಡದಿಂದ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕಗಳ ಆಯ್ದ ಪ್ರಸಂಗಗಳು ಪ್ರದರ್ಶನಗೊಂಡವು.

ಸ್ನೇಹಜೀವಿ ಸಾಮಾಜಿಕ, ಸಾಂಸ್ಕೃತಿಕ ಕ್ರೀಡಾ ಸಂಘದ ಅಧ್ಯಕ್ಷ ಕೆ.ನಾಗರಾಜ, ತಬಲ ವಾದಕ ಸಿ.ಡಿ.ವಿರೂಪಾಕ್ಷಪ್ಪ, ಟ್ರಸ್ಟ್ ಅಧ್ಯಕ್ಷ ಬಿ.ಗುರುಮಹಾಂತೇಶ, ಕಾರ್ಯದರ್ಶಿ ಕುರುಬರ ಹೇಮೇಶ್ವರ, ಗಾಯಕ ಡಿ.ಪುರುಷೋತ್ತಮ, ಪ್ರಮುಖರಾದ ವೆಂಕಟೇಶ್, ಕುಮಾರಸ್ವಾಮಿ, ಬಿ.ಸಿದ್ದಪ್ಪ ಧರ್ಮಪ್ಪ, ಕೆ.ವೀರೇಶ, ಬಸವರಾಜ, ಪಂಪಾಪತಿ, ಟ್ಯಾಂಕಿ ಈರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net