ಆರ್ಯವೈಶ್ಯ ಟ್ರಸ್ಟ್ ವಿದ್ಯಾರ್ಥಿವೇತನ ವಿತರಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್

arya
Published on

ಬೆಂಗಳೂರು: ಶಿಕ್ಷಣ ಜ್ಞಾನ ಸಂಪಾದನೆಯ ಸಾಧನವಾಗಿದ್ದು, ಸ್ವಾವಲಂಬನೆ ಮತ್ತು ಉಜ್ವಲ ಭವಿಷ್ಯದ ಕೀಲಿಯಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದ್ದಾರೆ.

ಕರ್ನಾಟಕ ಆರ್ಯ ವೈಶ್ಯ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ 2024-25ನೇ ಸಾಲಿನ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಕುಟುಂಬಗಳ ಜೊತೆಗೆ ಸಮಾಜ ಮತ್ತು ರಾಷ್ಟ್ರದ ಭವಿಷ್ಯವೂ ಆಗಿದ್ದಾರೆ. ಸರಿಯಾದ ಸಂಪನ್ಮೂಲ ಮತ್ತು ಮಾರ್ಗದರ್ಶನ ಒದಗಿಸಿದರೆ, ಈ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ಮಾದರಿಯಾಗಬಹುದು. ನಮ್ಮ ಸಮಾಜದ ಅನೇಕ ಪ್ರಕಾಶಮಾನವಾದ ವಿದ್ಯಾರ್ಥಿಗಳು ಹಣಕಾಸಿನ ತೊಂದರೆಗಳಿಂದ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ, ಅಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿವೇತನವು ಅವರಿಗೆ ಬೆಂಬಲವಾಗಲಿದೆ.

ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಗೆ ಸಿದ್ಧವಾಗಿದೆ. ಸುಧಾರಿತ ಭಾರತ-ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ.

ರಾಜ್ಯದ 27 ಜಿಲ್ಲೆಗಳ 14ಸಾವಿರ ವಿದ್ಯಾರ್ಥಿಗಳಿಗೆ ಟ್ರಸ್ಟ್ ಮೂಲಕ 15 ಕೋಟಿ ರೂ. ವಿತರಿಸಲಾಗಿದ್ದು, ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 1 ಕೋಟಿ ರೂ. ಶಿಷ್ಯವೇತನ ವಿತರಿಸುತ್ತಿರುವ ಕರ್ನಾಟಕ ಆರ್ಯ ವೈಶ್ಯ ಚಾರಿಟಬಲ್ ಟ್ರಸ್ಟ್ ಕಾರ್ಯವನ್ನು ರಾಜ್ಯಪಾಲರು ಶ್ಲಾಸಿದರು.

ಕಾರ್ಯಕ್ರಮದಲ್ಲಿ ಶ್ರೀಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ನ್ಯಾಯಮೂರ್ತಿ ಪ್ರತಿಭಾ.ಎಂ.ಸಿಂಗ್, ಟ್ರಸ್ಟ್ನ ಡಾ.ಸಿ.ಎ.ಐ.ಎಸ್.ಪ್ರಸಾದ್, ಕೆ. ಆರ್.ಪ್ರದೀಪ್, ಡಾ.ಎಸ್.ವಿ.ಎಸ್.ಗುಪ್ತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net