ವಾಸವಿ ದೇವಿ ಭಾವಚಿತ್ರ ಮೆರವಣಿಗೆ

30GURUGUNTA 01
ವಾಸವಿ ಜಯಂತಿ ಅಂಗವಾಗಿ ಗುರುಗುಂಟಾದಲ್ಲಿ ಆರ್ಯವೈಶ್ಯ ಸಮಾಜದಿಂದ ವಾಸವಿದೇವಿಯ ಭಾವಚಿತ್ರವನ್ನು ಭಾನುವಾರ ಮೆರವಣಿಗೆ ನಡೆಸಲಾಯಿತು.
Published on

ಗುರುಗುಂಟಾ: ಗ್ರಾಮದಲ್ಲಿ ಆರ್ಯವೈಶ್ಯ ಸಮಾಜದಿಂದ ಶ್ರೀವಾಸವಿ ಜಯಂತಿಯನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ವಾಸವಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ವಾಸವಿ ದೇವಿಯ ಭಾವಚಿತ್ರ ಹಾಗೂ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಸಕಲ ಮಂಗಳವಾದ್ಯಗಳೊಂದಿಗೆ ಮುಖ್ಯಬೀದಿ, ಚಿದಾನಂದಗುಡಿ, ಜಟ್ಟೇರ್ ಗಲ್ಲಿ, ಮೂಮಿನ್‌ಗಲ್ಲಿ, ಸಂತೆ ಮಾರುಕಟ್ಟೆ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

ಆರ್ಯವೈಶ್ಯ ಮಂಡಳಿ, ವಾಸವಿ ಯುವಜನ ಸಂಘ, ವಾಸವಿ ಮಹಿಳಾ ಸಂಘದ ಪ್ರಮುಖರಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net