

ಹುಬ್ಬಳ್ಳಿ: ಜಗತ್ತಿನ ಬಹಳಷ್ಟು ದೇಶಗಳಲ್ಲಿ ಆಯಾ ಸ್ಥಳಿಯ ವೈದ್ಯ ಪದ್ಧತಿಗಳನ್ನು ಬಳಸಿ ಆರೋಗ್ಯ ಕಾಯ್ದುಕೊಳ್ಳುತ್ತಿದ್ದಾರೆ. ಆದರೆ, ಭಾರತದಲ್ಲಿ ಪಾಶ್ಚಾತ್ಯರ ಜೀವನಶೈಲಿಗೆ ಮಾರುಹೋಗಿ ಆರೋಗ್ಯದ ಜತೆ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ ಎಂದು ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.
ಇಲ್ಲಿಯ ಗುಜರಾತ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವೈದ್ಯರತ್ನಮ್ ಪಿ.ಎಸ್. ವಾರಿಯರ್ ಅವರ ಆರ್ಯ ವೈದ್ಯ ಶಾಲಾ ಹುಬ್ಬಳ್ಳಿ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಇಂದು ವಿಶ್ವದ ಅನೇಕ ರಾಷ್ಟ್ರಗಳು ಭಾರತೀಯ ಸಂಸತಿಗೆ ಹೆಚ್ಚು ಒತ್ತು ಕೊಡುತ್ತಿವೆ. ಯೋಗ, ಆಯುರ್ವೇದ ವೈದ್ಯ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಭಾರತದಲ್ಲಿ ಕೆಲವು ವೈದ್ಯರು ಆಯುರ್ವೇದದಲ್ಲಿ ಹೊಟ್ಟೆ ತುಂಬುತ್ತಿಲ್ಲ ಎಂದು ಇಂಗ್ಲಿಷ್ ಮೆಡಿಸಿನ್ ಶಿಾರಸು ಮಾಡುತ್ತಿದ್ದಾರೆ. ಆಯುರ್ವೇದದಲ್ಲಿ ಆಸಕ್ತಿ ವಹಿಸಿದರೆ ಇದರಲ್ಲಿಯೂ ಉನ್ನತ ಭವಿಷ್ಯವಿದೆ ಎಂದು ಹೇಳಿದರು.
ಧಾರವಾಡ ಹೈಕೋರ್ಟ್ ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಮಾತನಾಡಿ, ವೈದ್ಯನಾಗುವುದೆಂದರೆ ್ಯಾಷನ್ ಆಗಿಬಿಟ್ಟಿದೆ. ಎಷ್ಟೋ ಜನರು ಎಂಬಿಬಿಎಸ್ ಸೀಟ್ ಸಿಗಲಿಲ್ಲ ಎಂದು ಆಯುರ್ವೇದ (ಬಿಎಎಂಎಸ್) ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಸರಿಯಾದ ಕ್ರಮ ಅಲ್ಲ. ಭಾರತೀಯ ವೈದ್ಯ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿಂದ ಜ್ಞಾನ ಪಡೆದು ಹಲವು ದೇಶಗಳು ವೈದ್ಯಕಿಯ ಲೋಕದಲ್ಲಿ ಮುನ್ನಡೆ ಸಾಧಿಸಿವೆ. ಆಯುರ್ವೇದವನ್ನು ಆಸಕ್ತಿಯಿಂದ ಆಯ್ದುಕೊಳ್ಳಬೇಕು ಎಂದರು.
ಆಯುರ್ವೇದ ಎಂದರೆ ಇದು ಜೀವನ ಪದ್ಧತಿಯಾಗಿದೆ. ನಮ್ಮ ವೈದ್ಯ ಶಾಸ್ತ್ರದ ಮೇಲೆ ನಂಬಿಕೆ ಇರಬೇಕು. ಎಲ್ಲದಕ್ಕೂ ಮೊದಲು ಇದನ್ನು ಆಯ್ಕೆ ಮಾಡಿಕೊಳ್ಳಿ, ಆಗ ನಿಮಗೆ ಇದರ ಮಹತ್ವ ಗೊತ್ತಾಗುತ್ತದೆ ಎಂದು ವೈದ್ಯಕಿಯ ಕ್ಷೇತ್ರದ ಯುವಕರಿಗೆ ಸಲಹೆ ನೀಡಿದರು.
ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶ ಇ.ವಿ. ವೇಣುಗೋಪಾಲ್ ಅವರು ಮಾತನಾಡಿ, ಆಯುರ್ವೇದ ವೈದ್ಯ ಪದ್ಧತಿಯು ಕೆಲವು ತಪು$್ಪ ತಿಳಿವಳಿಕೆಗಳಿಂದಾಗಿ ಜನರಿಂದ ದೂರ ಇದೆ. ಕರೊನಾ ಸಾಂಕ್ರಾಮಿಕದ ನಂತರ ಭಾರತೀಯ ವೈದ್ಯಕಿಯದ ಬಗ್ಗೆ ತಿಳಿವಳಿಕೆ ಬಂದಿದೆ. ಮತ್ತೆ ನಾವು ನಮ್ಮ ವೈದ್ಯ ಪದ್ಧತಿಯತ್ತ ಮುಖ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಮುಖ್ಯ ವೈದ್ಯ ಡಾ. ಪಿ.ಎಂ. ವಾರಿಯರ್ ಅವರು ಮಾತನಾಡಿ, ಸಾಂಸತಿಕ ಹಾಗೂ ಧಾಮಿರ್ಕವಾಗಿ ಶ್ರೀಮಂತವಾಗಿರುವ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಶಾಖೆ ಆರಂಭಿಸಿರುವುದು ನಮಗೆಲ್ಲ ಸಂತೋಷ ತಂದಿದೆ. ಈ ಭಾಗದ ಜನರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ ಎಂದರು.
ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಿ.ಸಿ. ಗೋಪಾಲ ಪಿಳೈ ಸ್ವಾಗತಿಸಿದರು.
ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್., ಆರ್ಯ ವೈದ್ಯ ಶಾಲೆ ಹುಬ್ಬಳ್ಳಿ ಶಾಖೆಯ ವ್ಯವಸ್ಥಾಪಕ ಡಾ. ಜಿತೇಶ್ ಕೃಷ್ಣನ್, ಇತರರು ಉಪಸ್ಥಿತರಿದ್ದರು.