ತುಂಬಕೆರೆ ಗ್ರಾಮದಲ್ಲಿ ಅಲೆಮಾರಿ ಕುಟುಂಬಕ್ಕೆ ಅರುವಿ ಟ್ರಸ್ಟ್‌ ನೆರವು

1 (2)
Published on

ಮಂಡ್ಯ: ಅರುವಿ ಟ್ರಸ್ಟ್‌ನ 3ನೇ ವಾರ್ಷಿಕೋತ್ಸವದ ಅಂಗವಾಗಿ ತಾಲೂಕಿನ ತುಂಬಕೆರೆ ಗ್ರಾಮದಲ್ಲಿ ಅಲೆಮಾರಿ ಕುಟುಂಬಕ್ಕೆ ಗುರುವಾರ ಪಾದರಕ್ಷೆ ಹಾಗೂ ಉಪಹಾರ ವಿತರಣೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಪ್ರಭಾಕರ್ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಕಾನೂನು ವಿರೋಧಿಯಾಗಿದ್ದು, ಅವರಿಂದ ದುಡಿಸಿಕೊಳ್ಳುವುದು ಹಾಗೂ ದುಡಿಮೆಗೆ ಹಾಕುವುದು ಶಿಕ್ಷಾರ್ಹ ಅಪರಾಧ. ಮಕ್ಕಳು ಶಾಲೆಯಲ್ಲಿ ಓದುವುದು ಕಡ್ಡಾಯ. ಅಲೆಮಾರಿ ಜನಾಂಗದ ಮಕ್ಕಳು ಕೂಡ ಇತರೆ ಮಕ್ಕಳಂತೆ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಭಿಕ್ಷೆ ಮಾಡುವುದು ಕೂಡ ಅಪರಾಧ. ಆದ್ದರಿಂದ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಕರೆ ನೀಡಿದರು.

ಟ್ರಸ್ಟ್ ಅಧ್ಯಕ್ಷೆ ಅರುಣಾ ಈಶ್ವರ್ ಮಾತನಾಡಿದರು. ಪರಸ್ಪರ ಸಂಸ್ಥೆಯ ಅಧ್ಯಕ್ಷ ಡಿ.ದೇವರಾಜ್ ಕೊಪ್ಪ, ಕಾರ್ಮಿಕ ನಿರೀಕ್ಷಕರಾದ ಹೇಮಚಂದ್ರ, ಗಂಗಾಧರ್, ಕಲಾವಿದರಾದ ಎಚ್.ಪಿ.ವೈರಮುಡಿ ಹನಿಯಂಬಾಡಿ, ಶೇಖರ್ ಸಂತೆಕಸಲಗೆರೆ, ಬಸವರಾಜು, ರವೀಂದ್ರ, ಲೋಕೇಶ್, ಶೋಭಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net