ರಾಜ್ಯ ಮಟ್ಟದ ಕರಾಟೆ ಪಂದ್ಯದಲ್ಲಿ ಅರುಣ್ ತಂಡ ಚಾಂಪಿಯನ್

17ss1champianship team
ಶನಿವಾರಸಂತೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿನ್ನರ್, ರನ್ನರ್ ಚಾಂಪಿಯನ್‌ಷಿಪ್ ಪ್ರಶಸ್ತಿ ಪಡೆದ ತಂಡ.
Published on

ಶನಿವಾರಸಂತೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆ ವತಿಯಿಂದ ಶನಿವಾರಸಂತೆ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 7ನೇ ರಾಜ್ಯ ಮಟ್ಟದ ಕರಾಟೆ ಮತ್ತು ಯೋಗ ಪಂದ್ಯಾವಳಿಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಯೋಗ ಸಂಸ್ಥೆಯ ಹಿರಿಯ ತರಬೇತುದಾರ ಎನ್.ಎಸ್.ಅರುಣ್ ತಂಡವು ವಿನ್ನರ್ ಚಾಂಪಿಯನ್‌ಷಿಪ್ ತನ್ನದಾಗಿಸಿಕೊಂಡಿತು. ಹಿರಿಯ ತರಬೇತುದಾರ ಸಂಕೇತ್ ತಂಡವು ರನ್ನರ್ ಚಾಂಪಿಯನ್‌ಷಿಪ್ ಪಡೆದುಕೊಂಡಿತು.

ಕರಾಟೆ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ನಿಡ್ತ ವೃತ್ತ ಗ್ರಾಮ ಆಡಳಿತ ಅಧಿಕಾರಿ ಎಸ್.ಎ.ಅಬ್ದುಲ್ ರಜಾಕ್, ಕುಶಾಲನಗರ ಉಪ ನೋಂದಣಿ ಇಲಾಖೆಯ ಅಧಿಕಾರಿ ಎಸ್.ವಿ.ಸಚಿನ್, ನಂಜನಗೂಡು ಪೊಲೀಸ್ ಸಿಬ್ಬಂದಿ ಎಸ್.ಜೆ.ಶರಿಂತಾಜು, ಮಡಿಕೇರಿ ಪೊಲೀಸ್ ಸಿಬ್ಬಂದಿ ಸಲಾವುದ್ದೀನ್, ಕೊಣನೂರಿನ ಅಂಚೆ ಇಲಾಖೆಯ ಅಶ್ವಿತ ಅವರು ಪಾಲ್ಗೊಂಡು ಕರಾಟೆ ಮತ್ತು ಯೋಗ ಅಭ್ಯಾಸದಿಂದ ಆಗುವ ಉಪಯೋಗಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶನಿವಾರಸಂತೆಯ ಉದ್ಯಮಿ ಎಂ.ಡಿ.ಯೋಗಾನಂದ್, ತರಬೇತುದಾರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net