ಮ್ಯಾನ್ಯುವೆಲ್ ಸ್ಕಾೃವೆಂಜರ್ಸ್‌ಗಳಿಗೆ ಜಮೀನು ನೀಡಲು ಆಗ್ರಹ: ಕರ್ನಾಟಕ ಅರುಂಧತಿಯಾರ್ ಮಹಾಸಭಾ ಪ್ರತಿಭಟನೆ

Arundhatiyar Mahasabha workers protest Mandya
Published on

ಮಂಡ್ಯ: ಜಿಲ್ಲೆಯಲ್ಲಿ ಗುರುತಿಸಿರುವ 802 ಮ್ಯಾನ್ಯುವೆಲ್ ಸ್ಕಾೃವೆಂಜರ್ಸ್‌ಗಳಿಗೆ ತಲಾ ಐದು ಎಕರೆ ಜಮೀನು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್‌ಎಂ.ವಿ.ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹೋಗಿ ಧರಣಿ ನಡೆಸಿದರು. ಜಿಲ್ಲೆಯಲ್ಲಿ ಹೊಸದಾಗಿ ನಗರಸಭೆ, ಪುರಸಭೆ ಗ್ರಾಮ ಪಂಚಾಯಿತಿಗಳಲ್ಲಿ ಸ್ವಯಂ ಘೋಷಣಾ ನಮೂನೆ ಮೂಲಕ ಅರ್ಜಿ ಸಲ್ಲಿಸಿರುವ 700 ಮ್ಯನ್ಯುವೆಲ್ ಸ್ಕಾೃವೆಂಜರ್ಸ್ ಕುಟುಂಬಗಳೆಂದು ಪರಿಗಣಿಸಿ 40 ಸಾವಿರ ರೂ ಒಟಿಎ ಹಣ ಮತ್ತು ಐಡಿ ಕಾರ್ಡ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಮ್ಯಾನ್ಯುವೆಲ್ ಸ್ಕಾೃವೆಂಜರ್ಸ್ ಸಫಾಯಿ ಕರ್ಮಚಾರಿಗಳಲ್ಲಿ ನಿವೇಶನ ರಹಿತರಿಗೆ ಮಾತ್ರ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಹೋಬಳಿ ಮೊಗರಹಳ್ಳಿ ಸ.ನಂ.126 ರಲ್ಲಿ 11.29 ಎಕರೆಯನ್ನು ಆಶ್ರಯ ನಿವೇಶನಕ್ಕಾಗಿ ಮಂಜೂರು ಮಾಡಿರುವ ಸರ್ಕಾರಿ ಜಮೀನಿನಲ್ಲಿ ನಿವೇಶನ ಅಥವಾ ಮನೆಗಳನ್ನು ಕಟ್ಟಿಸಿಕೊಡಲು ಕ್ರಮ ವಹಿಸಬೇಕು. ನಗರಸಭೆ ಮತ್ತು ಪುರಸಭೆಗಳಲ್ಲಿ ಹೊರಗುತ್ತಿಗೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಾದ ಲೋಡರ್ಸ್, ಸಹಾಯಕರು, ಚಾಲಕರು, ವಾಟರ್ ಮ್ಯಾನ್‌ಗಳನ್ನು ಕೂಡಲೇ ನೇರ ಪವಾತಿ ಅಡಿ ನೇಮಕಾತಿ ಮಾಡಲು ಕ್ರಮ ವಹಿಸಬೇಕು. ನೀವೇಶನ ರಹಿತರಿಗೆ ನಿವೇಶನ ನೀಡಬೇಕು. ಜತೆಗೆ ಮೂಲ ಸೌಲಭ್ಯಗಳನ್ನು ಮೂರು ತಿಂಗಳೊಳಗೆ ನೀಡಬೇಕು ಎಂದು ಆಗ್ರಹ ಪಡಿಸಿದರು.

ಮ್ಯಾನ್ಯುವೆಲ್ ಸ್ಕಾೃವೆಂಜರ್ಸ್ ಮಕ್ಕಳೆಲ್ಲರೂ ಶಿಕ್ಷಣ ಮುಗಿಸಿ ನಿರುದ್ಯೋಗಿಗಳಾಗಿದ್ದರೆ. ಆದ್ದರಿಂದ ಅವರನ್ನು ಗುರುತಿಸಿ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು. ಮ್ಯಾನ್ಯುವೆಲ್ ಸ್ಕಾೃವೆಂಜರ್ಸ್‌ಗಳಿಗೆ ಸಫಾಯಿ ಕರ್ಮಚಾರಿಗಳಿಗೆ ತುಂಡು ಗುತ್ತಿಗೆ ನೀಡಿ ಸಹಕರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಕೃಷ್ಣ, ಗೌರವಾಧ್ಯಕ್ಷ ಕುಮಾರ್, ಜಿಲ್ಲಾಧ್ಯಕ್ಷೆ ನಾಗಮಣಿ, ಉಪಾಧ್ಯಕ್ಷ ಆರ್.ನಾಗರಾಜು, ಮುಖಂಡರಾದ ಪಳನಿ, ಅವನಾಸಿ, ವಿಜಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net