ಮರು ಸರ್ವೇ ವಿಸ್ತರಿಸುವಂತೆ ಆಗ್ರಹ: ಅರುಂಧತಿಯಾರ್ ಪೌರಕಾರ್ಮಿಕರ ಮಹಾಸಭಾ ಅಧ್ಯಕ್ಷೆ ಕೆ.ನಾಗಮಣಿ ಮನವಿ

Arundhatiyar Civil Servants Mahasabha Press Conference Mandya
Published on

ಮಂಡ್ಯ: ಮ್ಯಾನುಯಲ್ ಸ್ಕಾೃವೆಂಜರ್‌ಗಳ ಮರು ಸರ್ವೆ ಕಾರ್ಯಕ್ಕೆ ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನಾಂಕವಾಗಿದೆ. ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಇನ್ನೂ ಒಂದು ತಿಂಗಳ ಮಟ್ಟಿಗೆ ವಿಸ್ತರಿಸುವಂತೆ ಅರುಂಧತಿಯಾರ್ ಪೌರಕಾರ್ಮಿಕರ ಮಹಾಸಭಾದ ಅಧ್ಯಕ್ಷೆ ಕೆ.ನಾಗಮಣಿ ಮನವಿ ಮಾಡಿದರು.

ಮ್ಯಾನುಯಲ್ ಸ್ಕಾೃವೆಂಜರ್‌ಗಳ ಗುರುತಿನ ಚೀಟಿ ನೀಡುವಂತೆ ಒತ್ತಾಯ ಮಾಡಲಾಗಿ 2021ರಲ್ಲಿ ರಾಜ್ಯ ಸರ್ಕಾರ ಸರ್ವೆ ಕಾರ್ಯ ಜಾರಿಗೆ ತಂದಿದೆ. ಆದರೆ 1 ಸಾವಿರ ಮ್ಯಾನುಯಲ್ ಸ್ಕಾೃವೆಂಜರ್‌ಗಳನ್ನು ಮಾಹಿತಿ ಕೊರತೆಯ ಕಾರಣದಿಂದಾಗಿ ಗುರುತಿಸಲಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗುರುತಿಸಲಾಗದ ಮ್ಯಾನುಯಲ್ ಸ್ಕಾೃವೆಂಜರ್‌ಗಳಿಗೆ ಗುರುತಿನ ಚೀಟಿ ನೀಡಲು ದಾಖಲೆಗಳನ್ನು ಪಡೆಯಬೇಕಿದೆ. ಆದರೆ ನೀಡಿರುವ ಗಡುವು ತುಂಬಾ ಕಡಿಮೆಯಾಗಿದೆ. ಫಲಾನುಭವಿಗಳಿಗೆ ದಾಖಲೆ ಸರಿಪಡಿಸಿಕೊಳ್ಳಲು 22 ದಿನ ಬೇಕಾಗಿದ್ದು, ನೀಡಿರುವ ಗಡುವನ್ನು ವಿಸ್ತರಿಸುವ ಮೂಲಕ ಜಿಲ್ಲೆಯ ಪೌರಕಾರ್ಮಿಕರು, ಸ್ವಚ್ಛತಾ ಕಾಮಿಕರು ಹಾಗೂ ಅಖಿಲ ಕರ್ನಾಟಕ ಅರುಂಧತಿಯಾರ್ ಪೌರಕಾರ್ಮಿಕರ ಮಹಾಸಂಘಟನೆಗಳ ಪದಾಧಿಕಾರಿಗಳಿಗೆ ಮರು ಸರ್ವೆ ಕಾರ್ಯದಲ್ಲಿ ತೊಡಗಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

ಮಹಾಸಭಾದ ಕಾರ್ಯದರ್ಶಿ ಆರ್.ಬಾಬು(ಬನ್ನಯ್ಯ), ನಗರ ಉಪಾಧ್ಯಕ್ಷೆ ಗೌರಮ್ಮ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net