ಅತಿಥಿ ಉಪನ್ಯಾಸಕರ ಮುಷ್ಕರಕ್ಕೆ ವಿಪ ಮಾಜಿ ಸದಸ್ಯ ಅರುಣ ಶಹಾಪುರ ಬೆಂಬಲ

ARUN SHAPUR SUPPORT STRIKE
ವಿಜಯಪುರ ಜಿಲ್ಲಾಡಳಿತ ಹೊರಾವರಣದಲ್ಲಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಮುಷ್ಕರಕ್ಕೆ ವಿಪ ಮಾಜಿ ಸದಸ್ಯ ಅರುಣ ಶಹಾಪುರ ಬೆಂಬಲ ಸೂಚಿಸಿದರು. ಡಾ. ಆನಂದ ಕುಲಕರ್ಣಿ, ಸುರೇಶ ಡಬ್ಬಿ, ಡಾ. ಆರ್.ಎಲ್. ಕಡೆಮನಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸೇವೆ ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಮುಷ್ಕರಕ್ಕೆ ವಿಪ ಮಾಜಿ ಸದಸ್ಯ ಅರುಣ ಶಹಾಪುರ ಬೆಂಬಲ ಸೂಚಿಸಿದ್ದಾರೆ.

ನಗರದ ಜಿಲ್ಲಾಡಳಿತ ಕಚೇರಿ ಹೊರಾವರಣದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಮುಷ್ಕರ ಗುರುವಾರ 29ನೇ ದಿನಕ್ಕೆ ಕಾಲಿರಿಸಿದ್ದು, ಬೆಂಬಲ ಸೂಚಿಸಿ ಮಾತನಾಡಿದ ಶಹಾಪುರ, ಸರ್ಕಾರ ಶೀಘ್ರದಲ್ಲಿಯೇ ಅತಿಥಿ ಉಪನ್ಯಾಸಕ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ಸುಮಾರು 20 ವರ್ಷಗಳಿಂದ ಅತಿಥಿ ಉಪನ್ಯಾಸಕರು ಸಂಕಷ್ಟಗಳ ಮಧ್ಯೆಯೇ ಸೇವೆ ಸಲ್ಲಿಸುತ್ತಿದ್ದಾರೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನಕ್ಕೆ ಬಾರದಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಬೇಡಿಕೆ ಈಡೇರಿಸಬೇಕೆಂದರು.

ಡಾ. ಆನಂದ ಕುಲಕರ್ಣಿ, ಸುರೇಶ ಡಬ್ಬಿ, ಡಾ. ಆರ್.ಎಲ್. ಕಡೆಮನಿ, ಡಾ. ಸುರೇಶ ಬಿರಾದಾರ, ಡಾ. ಭಾರತಿ ಹಿರೇಮಠ, ಡಾ. ರೇಣುಕಾ ಹೆಬ್ಬಾಳ, ಡಾ. ಎಸ್.ಐ. ಎಂಭತ್ನಾಳ, ಡಾ. ಆರ್.ಬಿ. ನಾಗರಡ್ಡಿ, ಡಾ. ಡಿ.ಬಿ. ಕುಲಕರ್ಣಿ, ಡಾ. ಆರ್.ಕೆ. ತೇಲಿ, ಡಾ. ಖುದ್ದುಸ್ ಪಟೇಲ, ಡಾ. ವೀಣಾ ಕಡಕೋಳ, ಡಾ. ಶ್ರೀದೇವಿ ಜತ್ತಿ, ಡಾ. ವಿಜಯಲಕ್ಷ್ಮಿ ಪಾಟೀಲ, ಡಾ. ಜಯಮ್ಮ, ಶ್ರೀಶೈಲ ಹೆಬ್ಬಿ, ಗೋಪಾಲ ಚಕ್ರಸಾಲಿ, ವಿ.ಸಿ. ಮಾಳಜಿ, ಬಿ.ಎಂ. ಪಾಟೀಲ, ಮಹೇಶ ಕಲ್ಲೂರ, ವಿ.ವಿ. ಕಲ್ಮೇಶ್ವರ, ಭೀಮಾಶಂಕರ ಹಡಪದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net