

ಹಿರೀಸಾವೆ: ಹೋಬಳಿಯ ಕಬ್ಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅರುಣಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕಾಂತರಾಜ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ 9 ನಿರ್ದೇಶಕ ಸ್ಥಾನಗಳಿಗೆ ತಲಾ ಒಬ್ಬರಂತೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹೇಮಂತ್ ಘೋಷಿಸಿದರು.
ಅಧ್ಯಕ್ಷ ಕೆ.ಬಿ.ಅರುಣಕುಮಾರ್, ಉಪಾಧ್ಯಕ್ಷ ಕಾಂತರಾಜ್, ನಿರ್ದೇಶಕರಾದ ಕರುಣಾಕರ್, ಆರ್.ಕುಮಾರಸ್ವಾಮಿ, ಚನ್ನಯ್ಯ, ಲಕ್ಷ್ಮೀಕಾಂತ್, ಶ್ರೀಕಂಠು, ಪುಟ್ಟಸ್ವಾಮಿಗೌಡ, ನಂಜೇಗೌಡ, ಸಾವಿತ್ರಮ್ಮ ಹಾಗೂ ಕಾಂಚನಾ ಅವರನ್ನು ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಅಭಿನಂದಿಸಿದರು.
ಮುಖಂಡರಾದ ಬೊಮ್ಮೇಗೌಡ, ಕೆ.ಟಿ.ನಾಗರಾಜ್, ವೆಂಕಟಪ್ಪಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್, ಸಿಬ್ಬಂದಿ ಸಚಿನ್, ಗೋವಿಂದಪ್ಪ, ನಳಿನಾ ಇತರರು ಇದ್ದರು.