

ಕುಶಾಲನಗರ:
ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶÀ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್. ಅರುಣ್ ರಾವ್ ಪುನರಾಯ್ಕೆಯಾದರು. 10 ನಿರ್ದೇಶಕರ ಸ್ಥಾನಕ್ಕೆ ಫೆ.13 ರಂದು ನಡೆದ ಚುನಾವಣೆಯಲ್ಲಿ ಅರುಣ್ ರಾವ್ ತಂಡ ಜಯಭೇರಿ ಬಾರಿಸಿತ್ತು.
ಈ ಹಿನ್ನಲೆಯಲ್ಲಿ ಸೋಮವಾರ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಸ್.ಆರ್. ಅರುಣ್ ರಾವ್, ಉಪಾಧ್ಯಕ್ಷರಾಗಿ ಕಾವೇರಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಧಾನಕ್ಕೆ ಒಂದೊAದು ನಾಮಪತ್ರಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಆಗಿದೆ. ಈ ಸಂದರ್ಭ ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಕಾವೇರ ಹಾಗೂ ನಿರ್ದೇಶಕರಾದ ಬಿ.ಎಸ್. ಚಂದ್ರ, ಬಿ.ಸಿ. ಕಮಲ, ರಾಜು, ಕಾಳಯ್ಯ, ಉದಯಕುಮಾರ್, ಶ್ಯಾಮ್, ಗಂಗಾಧರ್, ದೇವಿರಮ್ಮ, ಚುನಾವಣಾ ಅಧಿಕಾರಿ ಹಿತೇಂದ್ರ, ಕಾರ್ಯನಿರ್ವಾಹಣಾಧಿಕಾರಿ ಹನಿಕುಮಾರ್ ಇದ್ದರು.