ನಿನ್ನೆ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ,.. ಇಂದು ಫ್ರೀ ಕಾಶ್ಮೀರ ಪ್ಲಕಾರ್ಡ್​ ಹಿಡಿದ ಆರುದ್ರಾ... ಯಾರಿವರೆಲ್ಲ?

Aarudra 21 FEB 20
Published on

ಬೆಂಗಳೂರು: ಸಿಎಎ ವಿರೋಧಿಸಿ ಗುರುವಾರ ನಡೆದ ಪ್ರತಿಭಟನಾ ವೇದಿಕೆಯಲ್ಲಿ ಪಾಕ್ ಪರ ಘೋಷಣೆ ಕೂಗಿ ಅಮೂಲ್ಯ ಜೈಲಿಗೆ ಸೇರಿದ್ದಾಗಿದೆ. ಆಕೆಯ ವರ್ತನೆ ಖಂಡಿಸಿ ಶುಕ್ರವಾರ ಬೆಂಗಳೂರಿನ ಟೌನ್ ಹಾಲ್ ಬಳಿ ಕೆಲವು ಸಂಘಟನೆಗಳವರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮತ್ತೊಬ್ಬಾಕೆ ಫ್ರೀ ಕಾಶ್ಮೀರ ಪ್ಲಕಾರ್ಡ್ ಹಿಡಿದುಕೊಂಡು ಪ್ರತ್ಯಕ್ಷ!

ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದು, ಆಕೆಯ ಹೆಸರು ಆರುದ್ರಾ ಎಂದು ಗುರುತಿಸಲಾಗಿತ್ತು. ಆಕೆಯ ವಿರುದ್ಧ ಪ್ರಕರಣವನ್ನು ದಾಖಲಿಸಿ ವಿಚಾರಣೆ ಆರಂಭಿಸಿದ್ದಾರೆ.

ಆಕೆಯನ್ನು ಪೊಲೀಸರು ಕರೆದೊಯ್ದ ಕೂಡಲೇ, ಪೊಲೀಸ್ ಠಾಣೆಗೆ ಆರುದ್ರಾ ಬೆಂಬಲಿಗರಿಬ್ಬರು ಜಮಾಯಿಸಿದ್ದು, ಪೊಲೀಸರ ಜೊತೆ ವಾಗ್ವಾದ ಮಾಡಿದ್ದಾರೆ. ಬೆಂಬಲಿಗರ ಪೈಕಿ ಒಬ್ಬ ಯುವತಿ ಮತ್ತು ಯುವಕರಿದ್ದರು. ಅವರು ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಬೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net