ಆರೂಢ ಶ್ರೀ ಪ್ರಶಸ್ತಿಗೆ ಅರ್ಜಿ

Published on

ಹೂವಿನಹಿಪ್ಪರಗಿ: ಬಸವನಬಾಗೇವಾಡಿ ತಾಲೂಕಿನ ಆರೂಢರ ಐಕ್ಯಸ್ಥಳ ಆರೂಢನಂದಿಹಾಳದ ಶ್ರೀ ಗುರು ಆರೂಢರ 42 ಪುಣ್ಯಸ್ಮರಣೋತ್ಸವ, ಆರೂಢ ಸೇವಾ ಸಂಸ್ಥೆಯ 14ನೇ ವಾರ್ಷಿಕೋತ್ಸವ ನಿಮಿತ್ತ ಆರೂಢ ಶ್ರೀ ಪ್ರಶಸ್ತಿಗೆ ನಾಡಿನ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ, ಧಾರ್ಮಿಕ, ಶಿಕ್ಷಣ, ಸಾಹಿತ್ಯ, ನೃತ್ಯ, ಉದ್ದಿಮೆ, ಕಲೆ, ಬಹುಮುಖ ಪ್ರತಿಭೆ, ಚಿತ್ರಕಲೆ, ಸಂಕೀರ್ಣ, ಸಂಗೀತ, ಸರ್ಕಾರಿ, ಸಾಮಾಜಿಕ ಕ್ಷೇತ್ರಗಳಲ್ಲಿ ಮಾತ್ರ ಗಣನೀಯ ಸೇವೆ ಸಲ್ಲಿಸಿದ ನಾಡಿನ ಸಾಧಕರು ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಾಗೂ ಪೂರಕ ಸೂಕ್ತ ದಾಖಲಾತಿ, ಮೂರು ಭಾವಚಿತ್ರಗಳ ಜತೆಗೆ ಅರ್ಜಿಯನ್ನು ಡಿ.10 ರೊಳಗಾಗಿ ಸಲ್ಲಿಸಬೇಕು. ಅರ್ಜಿಯನ್ನು ಎಂ.ಜಿ ಕನ್ನೂರ, ಸಂಚಾಲಕರು, ಆರೂಢ ಸೇವಾ ಸಂಸ್ಥೆ, ಆರೂಢಶಾಂತ ಬಸವಾಲಯ, ಎರಡನೇ ಕ್ರಾಸ್, ಹುಡ್ಕೋ ಕಾಲನಿ, ಬಸವನಬಾಗೇವಾಡಿ-586203, ವಿಜಯಪುರ ಜಿಲ್ಲೆ ಇಲ್ಲಿಗೆ ಸಲ್ಲಿಸಬೇಕು. ಮಾಹಿತಿಗಾಗಿ ಮೊ. 9740248006 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net