ಆರೂಢ ಶ್ರೀ ಪ್ರಶಸ್ತಿ ಸ್ವಾತಿ ಆಯ್ಕೆ

rvt 8- swati
ಸ್ವಾತಿ
Published on

ರೇವತಗಾಂವ: ಸಮೀಪದ ನಿವರಗಿ ಗ್ರಾಮದ ಸ್ವಾತಿ ಮಲ್ಲಿಕಾರ್ಜುನ ತುಪ್ಪದ ಅವರು ಬಸವನಬಾಗೇವಾಡಿಯ ಶ್ರೀಗುರು ಆರೂಢ ಸೇವಾ ಸಂಸ್ಥೆಯ ಆರೂಢ ಶ್ರೀ ರಾಜ್ಯಮಟ್ಟದ ಪಶಸ್ತಿಗೆ ಭಾಜನರಾಗಿದ್ದಾರೆ.

ಸ್ವಾತಿ ಅವರು ಕರ್ನಾಟಕದ ಗಡಿಭಾಗದಲ್ಲಿನ ಚಡಚಣ ತಾಲೂಕಿನ ನಿವರಗಿ ಗ್ರಾಮದವಳ್ಳಾಗಿದ್ದು, ಸ್ವಪ್ರಯತ್ನದಿಂದ ಭರತನಾಟ್ಯ, ರಸಪ್ರಶ್ನೆ, ಕಂಠಪಾಠ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಶಾಲೆ, ಕ್ಲಸ್ಟರ್, ತಾಲೂಕು ಹಾಗೂ ಜಿಲ್ಲಾ ಹಂತರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವಾರು ಬಾರಿ ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿ ಸಾಧನೆಗೆ ಶ್ರದ್ಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ತುಪ್ಪದ, ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net