

ಚಿತ್ರದುರ್ಗ: ನಗರದ ಶ್ರೀ ಅಹೋಬಲ ಟಿವಿಎಸ್ ಶೋ ರೂಂ.ಗೆ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಅವರು ಸೋಮವಾರ ಭೇಟಿ ನೀಡಿ ಶೋ ರೂಂ ಮಾಲೀಕ ಅರುಣ್ ಅವರಿಗೆ ಶುಭ ಕೋರಿದರು.
ಕಳೆದ ಒಂದು ವರ್ಷದ ಉತ್ತಮ ಸಾಧನೆಯ ಮೂಲಕ ಉತ್ತರ ಕರ್ನಾಟಕದಲ್ಲಿ ಟಿವಿಎಸ್ ಕಂಪನಿಯ ದ್ವಿ ಚಕ್ರವಾಹನಗಳ ಮಾರಾಟದಲ್ಲಿ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪಡೆದಿರುವುದು ಹೆಮ್ಮೆ ವಿಚಾರವಾಗಿದೆ. ಅರುಣ್ ಅವರ ಶ್ರಮಕ್ಕೆ ದೇವರು ಪ್ರತಿಫಲ ನೀಡುತ್ತಿದ್ದಾನೆ.
ಶೋ ರೂಂ ಇನ್ನಷ್ಟು ಗ್ರಾಹಕ ಸ್ನೇಹಿಯಾಗಲಿ,ಜಿಲ್ಲೆ ಇತರೆಡೆಗೂ ಇವರ ವಹಿವಾಟು ವಿಸ್ತರಣೆಯಾಗಲಿ ಎಂದು ಆಶಿಸಿದರು. ಕಾಲುವೇಹಳ್ಳಿ ಪಾಲಯ್ಯ,ವಿಜಯ್,ರವಿಕುಮಾರ್,ಭೀಮಣ್ಣ.ವಿದ್ಯಾದರ್,ಸಾದಿಕ್,ಶ್ರೀನಿವಾಸ್ ಮತ್ತಿತರರು ಇದ್ದರು.