ವಿಜಯಪುರ : ಕಲಾವಿದರು ದೇಶದ ಸಂಪತ್ತು

2
ವಿಜಯಪುರ ನಗರದ ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಳ್ಳಾರಿಯ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಬಿ.ನಾಗರಾಜ, ಪಿ.ಎಸ್.ಕಡೇಮನಿ, ರಮೇಶ ಚವ್ಹಾಣ, ಮಲ್ಲಿಕಾರ್ಜುನ ಬಜಂತ್ರಿ ಮತ್ತಿತರರಿದ್ದರು.
Published on

ವಿಜಯಪುರ : ಕಲಾವಿದರು ಈ ದೇಶದ ಸಂಪತ್ತು. ಕಲೆ, ಸಾಹಿತ್ಯ, ಸಂಗೀತ ನಾಡಿನ ಸಾಂಸ್ಕೃತಿಕ ಅಸ್ಮಿತೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಭಿವ್ಯಕ್ತಪಡಿಸಿದರು.

ನಗರದ ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಳ್ಳಾರಿಯ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಪಂಚಕ್ಕೆ ಭಾರತದ ಕೊಡುಗೆಗಳಲ್ಲಿ ಕಲೆ, ಸಾಹಿತ,್ಯ ಸಂಸ್ಕೃತಿ ಮುಂಚೂಣಿಯಲ್ಲಿದೆ. ಹಲವಾರು ದೇಶದ ಸಾಂಸ್ಕೃತಿಕ ಚಿಂತಕರು ನಮ್ಮ ದೇಶದ, ರಾಜ್ಯದ ಪರಂಪರೆಯನ್ನು ಅಧ್ಯಯನ ಮಾಡಲು ಬರುತ್ತಾರೆ. ಅದಕ್ಕೆ ಕಾರಣ ಇಲ್ಲಿಯ ಕಲಾವಿದರು. ಈ ಕಲಾವಿದರಿಗೆ ಸರ್ಕಾರ ಸ್ಪಂದಿಸುತ್ತಿರುವುದು ಸಂತೋಷದ ಸಂಗತಿ. ಇಂಥ ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಿರಲಿ ಎಂದರು.

ರಾಜ್ಯ ಲಲಿತಕಲಾ ಅಕಾಡೆಮಿ ಸದಸ್ಯ ರಮೇಶ ಚವ್ಹಾಣ ಮಾತನಾಡಿ, ವಿಜಯಪುರ ನಗರದಲ್ಲಿ ಕಲಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ನಾಡಿನ ನಾನಾ ಭಾಗದ ಕಲಾವಿದರು ಇಲ್ಲಿ ಬಂದು ಪ್ರದರ್ಶನ ಮಾಡುತ್ತಿರುವುದು ಇಲ್ಲಿಯ ಕಲಾಸಕ್ತರಿಗೆ ತುಂಬ ಸಂತೋಷವನ್ನುಂಟು ಮಾಡಿದೆ. ಇಲ್ಲಿ ಹೀಗೆ ನಿರಂತರವಾಗಿ ಕಲಾ ಕೆಲಸಗಳಾಗಲಿ ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ ಮಾತನಾಡಿ, ನಮ್ಮ ಇಲಾಖೆಯಲ್ಲಿರುವ ಈ ಆರ್ಟ್ ಗ್ಯಾಲರಿಯಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ನಿರಂತರವಾಗಿ ಇಲ್ಲಿ ಕಲಾವಿದರು ಪ್ರದರ್ಶನ, ಶಿಬಿರ ೀರ್ಪಡಿಸುತ್ತಿರುವುದರಿಂದ ನಮಗೂ ಕಲಾಕೃತಿ ನೋಡಿ ಆಸ್ವಾದಿಸುವಂತಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಪಿ.ಎಸ್.ಕಡೇಮನಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಯೋಜನೆ ಪಡೆದು ವಿಜಯಪುರದಲ್ಲಿ ಪ್ರದರ್ಶನ ಏರ್ಪಡಿಸಿದ್ದು ಸಂತೊಷದ ಸಂಗತಿ. ಇದರಿಂದ ಬೇರೆ ಬೇರೆ ಜಿಲ್ಲೆಯ ಮತ್ತು ರಾಜ್ಯದ ಕಲಾವಿದರು ನಮ್ಮ ಜಿಲ್ಲೆಯ ಕಲಾವಿದರೊಂದಿಗೆ ಅನುಸಂಧಾನವಾಗುತ್ತದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಹಿರಿಯ ಕಲಾವಿದರಾದ ಬಿ.ಎಸ್. ಪಾಟೀಲ್, ಲಿಂಗರಾಜ ಕಾಚಾಪುರ, ರುದ್ರಗೌಡ ಇಂಡಿ, ಶಿವಾನಂದ ಅಥಣಿ, ಮದನ ವಗ್ಯಾನವರ, ಯಾಮಿನಿ ಶಹಾ, ಜಿಲ್ಲಾ ಪ್ರವಾಸಿ ಅಧಿಕಾರಿ ತುಕಾರಾಮ ಪವಾರ, ಜಗದೇವ ಗುಣಕಿ ಹಾಗೂ ಕಲಾಸಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net