ಕಲಾವಿದ ಮುರ್ತುಜಸಾಬ ಘಟ್ಟಿಗನೂರಗೆ ಪ್ರಶಸ್ತಿ

Artist Murtujasaba Ghattiganura receives award
ಮುರ್ತುಜಸಾಬ ಘಟ್ಟಿಗನೂರ
Published on

ಇಳಕಲ್ಲ: ನಗರದ ವತ್ತಿ ರಂಗಭೂಮಿ ಕಲಾವಿದ ಮುರ್ತುಜಸಾಬ ಘಟ್ಟಿಗನೂರ ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಿಸಿದೆ.

ನಗರದ ಅಲಂಪುರ ಪೇಟೆಯಲ್ಲಿ ವಾಸಿಸುತ್ತಿರುವ ಮುರ್ತುಜಸಾಬ ಘಟ್ಟಿಗನೂರ ಹಲವಾರು ನಾಟಕ ಕಂಪನಿಗಳ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವೃದ್ಧಾೃಪದಲ್ಲೂ ತಮಗೆ ಸೂಕ್ತ ಎನಿಸುವ ಪಾತ್ರಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಕಲಾವಿದ ಮುರ್ತುಜಸಾಬ ಘಟ್ಟಿಗನೂರ ಅವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ವತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಬಲವಂತ ಪಾಟೀಲ, ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ, ಸಾಹಿತಿ ವಿಶ್ವನಾಥ ವಂಶಾಕತಮಠ, ರಂಗ ಸಂಘಟಕ ಮಹಾಂತೇಶ ಗಜೇಂದ್ರಗಡ ರಂಗಸಂಗಮ ಅಧ್ಯಕ್ಷೆ ರೇಶ್ಮಾ ಅಳವಂಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net